ಹರ್ಯಾಣದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್​ ಗೆ ಆಘಾತ: ಪುತ್ರಿ ಜತೆ ಬಿಜೆಪಿಗೆ ಸೇರ್ಪಡೆಯಾದ ಕಿರಣ್​ ಚೌಧರಿ

Prasthutha|

- Advertisement -

ನವದೆಹಲಿ: ಹರ್ಯಾಣದ ಕಾಂಗ್ರೆಸ್​ ಶಾಸಕಿ ಕಿರಣ್​ ಚೌಧರಿ ತಮ್ಮ ಮಗಳು ಶೃತಿ ಚೌಧರಿ ಜತೆಗೆ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

ವಿಧಾನಸಭಾ ಚುನಾವಣೆಗೂ ಮುನ್ನ ಮಾಡಿದ ಈ ನಿರ್ಧಾರ ಕಾಂಗ್ರೆಸ್​ ಗೆ ಪೆಟ್ಟು ಕೊಟ್ಟಂತಾಗಿದೆ. ಕಿರಣ್ ಮತ್ತು ಶ್ರುತಿ ಚೌಧರಿ ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

- Advertisement -

ಹರ್ಯಾಣದಲ್ಲಿ ಕಾಂಗ್ರೆಸ್ ವೈಯಕ್ತಿಕ ದಂಧೆ ನಡೆಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಇದರಲ್ಲಿ ನನ್ನಂತಹ ಪ್ರಾಮಾಣಿಕ ಧ್ವನಿಗಳಿಗೆ ಅವಕಾಶವಿಲ್ಲ. ನನ್ನಂತಹವರನ್ನು ಬಹಳ ಯೋಜನಾಬದ್ಧವಾಗಿ ಹತ್ತಿಕ್ಕಲಾಗುತ್ತದೆ. ಕಾಲಕಾಲಕ್ಕೆ ಅಪಮಾನಗಳನ್ನು ಮಾಡಿ ಷಡ್ಯಂತ್ರಗಳನ್ನು ಹೆಣೆಯುತ್ತಾರೆ. ನನ್ನ ಜನರನ್ನು ಪ್ರತಿನಿಧಿಸುವ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ನನ್ನ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ರಾಜೀನಾಮೆ ಪತ್ರದಲ್ಲಿ ಕಿರಣ್ ಬರೆದುಕೊಂಡಿದ್ದರು.

Join Whatsapp