ಅಮೆರಿಕ ಸರ್ಕಾರದ ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥೆಯಾಗಿ ಭಾರತ ಮೂಲದ ಕಿರಣ್ ಅಹುಜಾ ಆಯ್ಕೆ

Prasthutha|

- Advertisement -

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಅಮೆರಿಕದ ಎರಡು ಕೋಟಿ ನೌಕರರನ್ನು ನಿರ್ವಹಿಸುವ, ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥೆಯಾಗಿ ಭಾರತೀಯ-ಅಮೆರಿಕನ್ ವಕೀಲೆ ಮತ್ತು ಹಕ್ಕುಗಳ ಹೋರಾಟಗಾರ್ತಿ ಕಿರಣ್ ಅಹುಜಾ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

49 ವರ್ಷದ ಅಹುಜಾ ಅವರು, ಅಮೆರಿಕ ಸರ್ಕಾರದ ಈ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ-ಅಮೆರಿಕನ್‌ ವ್ಯಕ್ತಿಯಾಗಿದ್ದಾರೆ.

- Advertisement -

ಕಿರಣ್‌ ಅವರು, 2015 ರಿಂದ 2017 ರವರೆಗೆ ಅಮೆರಿಕದ ಸಿಬ್ಬಂದಿ ನಿರ್ವಹಣಾ ನಿರ್ದೇಶಕರ ಕಚೇರಿಯ ಸಿಬ್ಬಂದಿಯ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಎರಡು ದಶಕಗಳಿಗಿಂತಲೂ ಹೆಚ್ಚು ಸಾರ್ವಜನಿಕ ಸೇವೆ ಮತ್ತು ಲಾಭರಹಿತ/ ಸಾಮಾಜಿಕ ಸೇವಾ ವಲಯದಲ್ಲಿ ಸೇವೆ ಸಲ್ಲಿಸಿರುವ ಅನುಭವ ಇದೆ.

ಈ ಮೊದಲು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ನಾಗರಿಕ ಹಕ್ಕುಗಳ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

2003 ರಿಂದ 2008 ರವರೆಗೆ, ಕಿರಣ್‌ ಅಹುಜಾ ಅವರು ನ್ಯಾಷನಲ್ ಏಷ್ಯನ್ ಪೆಸಿಫಿಕ್ ಅಮೆರಿಕನ್ ವುಮೆನ್ಸ್ ಫೋರಂನ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.



Join Whatsapp