ಕಿಂಗ್ಸ್ ಕಲ್ಲಾಪು ವತಿಯಿಂದ ‘ಗ್ರ್ಯಾಂಡ್ ಕೆಕೆ ಟ್ರೋಫಿ 2022’ ಕ್ರಿಕೆಟ್ ಪಂದ್ಯಾಟ

Prasthutha|

ತೊಕೊಟ್ಟು: ಕಲ್ಲಾಪುವಿನಲ್ಲಿ ಸೌಹಾರ್ದತೆಯನ್ನು ಕಾಪಾಡುವ ಮತ್ತು ಸಾಮಾಜಿಕ ಸೇವೆಯ ಧ್ಯೇಯೋದ್ದೇಶವನ್ನಿಟ್ಟುಕೊಂಡು ಕಿಂಗ್ಸ್ ಕಲ್ಲಾಪು ವತಿಯಿಂದ ಕಲ್ಲಾಪುವಿನಲ್ಲಿ ಇದೇ ಮೊದಲ ಬಾರಿಗೆ ಫೆಬ್ರವರಿ 26,27 ರಂದು ಆಝಾದ್ ಮೈದಾನದಲ್ಲಿ ಉಳ್ಳಾಲ ಕ್ರಿಕೆಟ್ ಬೋರ್ಡಿನ ಅಧೀನದಲ್ಲಿರುವ ಎಲ್ಲಾ ಕ್ರಿಕೆಟ್ ತಂಡವನ್ನು ಒಳಗೊಂಡಂತೆ ‘ಗ್ರ್ಯಾಂಡ್ ಕೆಕೆ ಟ್ರೋಫಿ 2022’ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಂಡಿದೆ .

- Advertisement -

ಕಿಂಗ್ ಕಲ್ಲಾಪು ಸಂಸ್ಥೆಯು ಸಾಮಾಜಿಕ ಸೇವಾ ಮನೋಭಾವ ಹೊಂದಿರುವ ಯುವಕರ ವೇದಿಕೆಯಾಗಿದ್ದು, ಹಲವಾರು ಸಮಾಜಮುಖಿ ಕಾರ್ಯವನ್ನು ನಿರ್ವಹಿಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp