ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಸೆಂಟ್ರಲ್ ಜೈಲ್ನಲ್ಲಿ 26 ಮೊಬೈಲ್ಗಳು ಪತ್ತೆಯಾಗಿದ್ದವು. ಅವುಗಳ ಜಾಡು ಹಿಡಿದ ಹೊರಟ ಪೊಲೀಸರು ಇದೀಗ ಕೊನೆಗೂ ಜೈಲ್ನಲ್ಲಿ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯನ್ನು ಲಾಕ್ ಮಾಡಿದ್ದಾರೆ.
ಹ್ಯಾಂಡ್ರಾಯ್ಡ್ ಮೊಬೈಲ್ಗಳ ಅಂಗಡಿ ಜೈಲಲ್ಲಿ ಇಟ್ಟುಕೊಂಡು, 80 ರಿಂದ 90 ಸಾವಿರ ರೂಪಾಯಿಗೆ ಖೈದಿ ಮೊಬೈಲ್ಗಳನ್ನ ಮಾರಾಟ ಮಾಡುತ್ತಿದ್ದ. ಕೆಜಿಎಫ್ ಮೂಲದ ವಿಜಯ್ ಎಂಬಾತನಿಂದ ಮೊಬೈಲ್ ಮಾರಾಟ ಮಾಡುತ್ತಿದ್ದ.
ಮರ್ಡರ್ ಕೇಸ್ನಲ್ಲಿ ಜೈಲಲ್ಲಿರುವ ಖೈದಿ ವಿಜಯ್, ಜೈಲಾಧಿಕಾರಿಗಳ ಸಹಾಯದಿಂದಲೇ ಮೊಬೈಲ್ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಕಾರಣದಿಂದಲೇ ದರ್ಶನ್ ಆ್ಯಂಡ್ ಗ್ಯಾಂಗ್ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ.