ಬಣಕಲ್: ಕಾಫಿ ತೋಟದಲ್ಲಿ ಕಾಳಿಂಗ ಸರ್ಪ ಸೆರೆ

Prasthutha|

ಬಣಕಲ್: ಬಣಕಲ್ ಸಮೀಪದ ಚಕ್ಕೋಡು ಕಾಫಿ ತೋಟದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಡಲಾಯಿತು.              

- Advertisement -

ಚಕ್ಕೋಡು ಜಗದೀಶ್ ಗೌಡ ಎಂಬವರ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ತೋಟದ ಕಾರ್ಮಿಕರಿಗೆ ಕಾಣಿಸಿಕೊಂಡಿತು.ಈಗ ಕಾಫಿ ತೋಟದಲ್ಲಿ ತೋಟದ ಕೆಲಸಗಳು ನಡೆಯುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಗಳಲ್ಲಿ ನಿರತರಾಗಿದ್ದಾಗ ಕಾಳಿಂಗ ಸರ್ಪ ಕಂಡು ಭಯಬೀತರಾದರು.ಕೂಡಲೇ ಮಾಲೀಕರಾದ ಜಗದೀಶ್ ಗೌಡರ ಗಮನಕ್ಕೆ ತಂದರು.ಕೂಡಲೇ ಬಣಕಲ್ ಉರಗ ಪ್ರೇಮಿ ಕೆ.ಎಚ್.ಮೊಹಮ್ಮದ್ ಆರೀಫ್ ಅವರನ್ನು ಕರೆಸಿ  ಬೃಹತ್ತಾದ ಕಾಳಿಂಗ ಸರ್ಪ ಸೆರೆ ಹಿಡಿದು ಚಾರ್ಮಾಡಿ ಸುರಕ್ಷಿತ ಅರಣ್ಯಕ್ಕೆ ಬಿಟ್ಟರು.ಗಸ್ತು ಅರಣ್ಯ ಅಧಿಕಾರಿಗಳಾದ ಮೊಹಸ್ಸಿನ್, ಜಯಪ್ಪ, ಪೊಲೀಸ್ ಸಿಬ್ಬಂದಿಗಳು  ಸ್ಥಳೀಯರು ಇದ್ದರು.