ದೈಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಭಕ್ತೆಯ ಹತ್ಯೆ: ಅರ್ಚಕ ಬಂಧನ

Prasthutha|

ಸೇಲಂ: ಇಲ್ಲಿ 28 ವರ್ಷದ ಮಹಿಳಾ ಭಕ್ತೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ 42 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆಯನ್ನು ಸೆಲ್ವಿ ಎಂದು ಗುರುತಿಸಲಾಗಿದೆ. ಬಂಧಿತ ಅರ್ಚಕನನ್ನು ಸೇಲಂನ ಶಿವತಪುರಂ ಬಳಿಯ ಪೆರುಮಾಂಪಟ್ಟಿಯ ವಿ. ಕುಮಾರ್ ಎಂದು ಗುರುತಿಸಲಾಗಿದೆ. ಈತ 20 ವರ್ಷಗಳ ಹಿಂದೆ ತಮ್ಮ ಕೃಷಿ ಭೂಮಿಯಲ್ಲಿ ಪೆರಿಯಾಂಡಿಚಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿ ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದ.

- Advertisement -

ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಅರ್ಚಕ ಬಯಸಿದ್ದು, ಮರ್ಯಾದಸ್ಥ ಕುಟುಂಬದ ಸಾತ್ವಿಕ ಹೆಣ್ಣು ಮಗಳಾದ ಸೆಲ್ವಿ ತಿರಸ್ಕರಿಸಿರುವ ಕಾರಣ ಹತ್ಯೆ ನಡೆಸಲಾದ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರ ಪ್ರಕಾರ, ಸೆಲ್ವಿ ಮತ್ತು ಆಕೆಯ ಪತಿ ವಿ. ಪಸುವರಾಜ್ ಕ 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ದಂಪತಿಗೆ ಮಗುವಾಗಿರಲಿಲ್ಲ. ಮಗುವಿಗಾಗಿ ಹಂಬಲಿಸಿದ ದೈವಭಕ್ತೆ ಸೆಲ್ವಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥಿಸುತ್ತಿದ್ದರು. ಅಕ್ಟೋಬರ್ 15 ರಂದು ಸೇಲಂ ಜಿಲ್ಲೆಯ ಎಲಂಪಿಳ್ಳೈ ಎಂಬಲ್ಲಿಗೆ ಸ್ನೇಹಿತನನ್ನು ಭೇಟಿ ಮಾಡಲು ಹೋಗುವುದಾಗಿ ಸೆಲ್ವಿ ಮನೆಯಿಂದ ಹೊರಟು ಹೋಗಿದ್ದವಳು ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ.

- Advertisement -

ಆತಂಕಗೊಂಡ ಪಸುವರಾಜ್ ಗುರುವಾರ ತಾರಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋಧನೆಗಿಳಿದ ಪೊಲೀಸರಿಗೆ ಕುಮಾರ್ ಒಡೆತನದ ದೇವಸ್ಥಾನದ ಬಳಿಯ ಪೊದೆಯಿಂದ ಸೆಲ್ವಿ ಶವ ಪತ್ತೆಯಾಗಿದೆ. ವಿಚಾರಣೆ ವೇಳೆ ಸೆಲ್ವಿ ಒಂದು ವಾರಕ್ಕೂ ಹೆಚ್ಚು ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಚಂದದ ಬದುಕಿಗಾಗಿ ಮಗುವೊಂದನ್ನು ಬಯಸಿ ದೇವಸ್ಥಾನಗಳಿಗೆ ಸಂದರ್ಶಿಸುತ್ತಿರಿವ ಭಕ್ತೆಯೊಬ್ಬರು ದೇವಸ್ಥಾನದ ಅರ್ಚಕರಿಂದಲೇ ಕೊಲೆಯಾಗಿ ಇಡೀ ಕುಡುಂಬ ಛಿದ್ರವಾಗಿರುವುದು ದುರಂತ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಅರ್ಚಕ ಕುಮಾರ್‌ನ್ನು ಬಂಧಿಸಿದ್ದಾರೆ.