ಗಾಝಾದಲ್ಲಿ ತನ್ನ 14 ಯೋಧರ ಹತ್ಯೆ: ಇಸ್ರೇಲ್

Prasthutha|

ಟೆಲ್ ಅವೀವ್: ಇಸ್ರೇಲ್ ಸೇನೆಯ ತೀವ್ರ ದಾಳಿಯ ನಡುವೆಯೂ ಹಮಾಸ್ ಪ್ರತಿರೋಧ ವ್ಯಕ್ತಪಡಿಸಿದಂತಾಗಿದ್ದು, ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆಯ 14 ಯೋಧರನ್ನು ಹಮಾಸ್ ಹತ್ಯೆ ಮಾಡಿದೆ ಎಂದು ಇಸ್ರೇಲ್ ಆರೋಪಿಸಿದೆ.

- Advertisement -

ಯೋಧರು ಇದ್ದ ವಾಹನದ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದ್ದು, ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಉಳಿದ 10 ಯೋಧರು ಪ್ರತ್ಯೇಕ ದಾಳಿಗಳಲ್ಲಿ ಹುತಾತ್ಮರಾಗಿದ್ದಾರೆ. ಈ ಮೂಲಕ ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ ಈವರೆಗೆ 153 ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆಯ ರೇಡಿಯೊ ತಿಳಿಸಿದೆ.

ಗಾಝಾದ ಎರಡನೇ ಅತಿದೊಡ್ಡ ನಗರವಾಗಿರುವ ಖಾನ್ ಯೂನಿಸ್‌ ಪ್ರದೇಶದಲ್ಲಿ ಹಮಾಸ್ ನಾಯಕರು ಅಡಗಿದ್ದಾರೆ ಎಂಬ ಕಾರಣಕ್ಕೆ ಗಾಝಾದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ದಾಳಿ ಮುಂದುವರಿಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ತಿಳಿಸಿದ್ದಾರೆ.

Join Whatsapp