ಚೆನ್ನೈ: ರಾಜ್ಯಪಾಲ ಸ್ಥಾನಕ್ಕೆ ಅರ್ಹತೆಯುಳ್ಳ ಮಹಿಳೆ ಯಾವ ರಾಜ್ಯದಲ್ಲೂ ನಿಮಗೆ ಸಿಕ್ಕಿಲ್ಲವೇ? ಎಂದು ಬಿಜೆಪಿ ನಾಯಕಿ ಖುಶ್ಬೂ ಪ್ರಶ್ನಿಸಿದ್ದಾರೆ. ಹೊಸ ರಾಜ್ಯಪಾಲರ ನೇಮಕಾತಿ ನಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ನಾಯಕಿ ರಾಷ್ಟ್ರಪತಿಯವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ.
ಇತ್ತೀಚೆಗೆ ಆಯ್ಕೆಯಾದ ರಾಜ್ಯಪಾಲರ ಪಟ್ಟಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಅವರು, ”ಮಾನ್ಯ ರಾಷ್ಟ್ರಪತಿಯವರೇ, ರಾಜ್ಯಪಾಲ ಸ್ಥಾನಕ್ಕೆ ಅರ್ಹತೆಯುಳ್ಳ ಮಹಿಳೆ ಯಾವ ರಾಜ್ಯದಲ್ಲೂ ನಿಮಗೆ ಸಿಕ್ಕಿಲ್ಲವೇ? ಯಾಕೆ ತಾರತಮ್ಯ ಮಾಡುತ್ತಿದ್ದೀರಿ? ಇದು ನನಗೆ ತುಂಬಾ ನೋವನ್ನುಂಟು ಮಾಡಿದೆ” ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಪಂಚಭಾಷಾ ನಟಿ ಖುಷ್ಬೂ ಸುಂದರ್ ಈ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.