ಖಿಲ್ರ್ ಜುಮಾ ಮಸ್ಜಿದ್ ಕೊಪ್ಪಳ ಆಲಂಪಾಡಿ ಸಜಿಪ ಮುನ್ನೂರು: ಮಹಾಸಭೆ ಮತ್ತು ನೂತನ ಆಡಳಿತ ಸಮಿತಿ ಆಯ್ಕೆ

Prasthutha|

ಸಜಿಪಮುನ್ನೂರು: ಬದ್ರಿಯಾ ಕೇಂದ್ರ ಜುಮಾ ಮಸ್ಜಿದ್ ಆಲಂಪಾಡಿ ಅಧೀನದಲ್ಲಿರುವ ಖಿಲ್ರ್ ಜುಮಾ ಮಸೀದಿಯ ಮಹಾಸಭೆ 24.05.2024ರಂದು ಸ್ಥಳೀಯ ಖತೀಬರಾದ ಹಾರಿಸ್ ಹನೀಫಿ ಉಸ್ತಾದರ ದುವಾದೊಂದಿಗೆ ಆರಂಭಗೊಂಡು, ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಶಾರದ ನಗರ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

ಸಭೆಯಲ್ಲಿ ಗತವರ್ಷದ ವರದಿ ಮಂಡಿಸಿ ಮತ್ತು ಹಲವು ವಿಷಯ ಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ನಂತರ 17 ಸದಸ್ಯರ ನೂತನ ಆಡಳಿತ ಸಮಿತಿ ರಚಿಸಿ 8 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

- Advertisement -

ಅಧ್ಯಕ್ಷರಾಗಿ ಇಬ್ರಾಹಿಂ ಪೆರ್ವ ಮತ್ತು ಉಪಾಧ್ಯಕ್ಷರಾಗಿ ರಹೀಂ ಆಲಾಡಿ ಅವರನ್ನು ಪುನರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಕೊಪ್ಪಳ, ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಕೊಪ್ಪಳ, ಇಲ್ಯಾಸ್ ಕೊಪ್ಪಳ ರಮೀಝ್ ಕೊಪ್ಪಳ ಹಾಗೂ
ಲೆಕ್ಕ ಪರಿಶೋಧಕರಾಗಿ ಯಾಕೂಬ್ ಪೆರ್ವ, ಖಜಾಂಜಿ ಯಾಗಿ ರಝಾಕ್ ಆಲಾಡಿ ಅವರನ್ನು ಆಯ್ಕೆ ಮಾಡಲಾಯಿತು. ಸ್ವಲಾತ್ ನೊಂದಿಗೆ ಮಹಾಸಭೆ ಕೊನೆಗೊಳಿಸಲಾಯಿತು.

Join Whatsapp