ಖತರ್ನಾಕ್‍ ಖದೀಮರ ಬಂಧನ:ಲಕ್ಷಾಂತರ ಮೌಲ್ಯದ ವಾಹನಗಳು ವಶಕ್ಕೆ

Prasthutha|

ಹಾಸನ: ವಿವಿಧ ರಾಜ್ಯಗಳಲ್ಲಿ  12 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಖದೀಮರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಾಹನ ,4 ಲಕ್ಷ ನಗದು ವಶಕ್ಕೆ ಪಡೆಯುವಲ್ಲಿ ಅರಸೀಕೆರೆ ಉಪ ವಿಭಾಗ ಪೊಲೀಸರು ಯಶಸ್ವಿಯಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

- Advertisement -

ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪುಣೆ ಜಿಲ್ಲೆಯ ಶಂಕರ್ ಮಂಜುಗೌಡ, ಹಾಸನ ಜಿಲ್ಲೆಯ ವಿಜಯ್ ಕುಮಾರ್ , ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ನಾ ಕೋಟ್ಯಾನ್, ತಮಿಳುನಾಡಿನ ಅಬ್ದುಲ್ ರಜಾಕ್ ಬಂಧಿತ ಆರೋಪಿಗಳಾಗಿದ್ದಾರೆ. ದ್ವಿಚಕ್ರ, ನಾಲ್ಕು ಚಕ್ರ ವಾಹನ ಹಾಗೂ ಇತರೆ ಕಳವು ಪ್ರಕರಣಗಳ ಹಿನ್ನೆಲೆ ಬಂಧಿತರಿಂದ ಒಟ್ಟು 21 ಲಕ್ಷ ಬೆಲೆಯ ಟಾಟಾ ಸುಮೋ , ಅಶೋಕ್ ಲೇಲ್ಯಾಂಡ್ ದೋಸ್ತ್ ಗೂಡ್ಸ್, ಒಂದು ಬುಲೆರೋ , ರಾಯಲ್ ಎನ್ ಫೀಲ್ಡ್ ಸೇರಿದಂತೆ 4 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅರೇಹಳ್ಳಿ ಪೊಲೀಸರು ಜೂ.16 ರಂದು ಮದಘಟ್ಟ ವೃತ್ತದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸಕಲೇಶಪುರ ಕಡೆಯಿಂದ ಬೇಲೂರು ಮಾರ್ಗವಾಗಿ ಬಂದ ವಾಹನವನ್ನು ತಪಾಸಣೆ ನಡೆಸಿದಾಗ ವಾಹನದಲ್ಲಿ  ಆಲನ್ ಕೀ, ಕಟ್ಟರ್, ಬ್ಯಾಟರಿ, ಅರಸ್ಪ್ಯಾನರ್ ಬಾಕ್ಸ್ ರಾಡ್ ವೀಲ್ ಬಾಕ್ಟಗಳನ್ನು ಅಮಾನತು ಪಡಿಸಿಕೊಳ್ಳಾಗಿದೆ ಎಂದು ತಿಳಿಸಿದರು.

- Advertisement -

ಪ್ರಕರದ ಆರೋಪಿಗಳ ಪತ್ತೆಗೆ ಹಳೇಬೀಡು ಪಿ.ಎಸ್ ಐ ಶ್ರೀಕಾಂತ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ಅಶೋಕ್ ನೇತೃತ್ವದದಲ್ಲಿ  ಹಳೆಬೀಡು ವೃತ್ತ ನಿರೀಕ್ಷಕ ಕಾಂತ ಹಾಗೂ ಪಿಎಸ್ ಐ ಸುರೇಶ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿ ಬಂಧಿತ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್‍ ನಂದಿನಿ ಇದ್ದರು.



Join Whatsapp