ಬಿಜೆಪಿಯನ್ನು ಹೀಯಾಳಿಸಿದ ಖರ್ಗೆ;  ಕ್ಷಮೆಯಾಚಿಸಲು ಆಗ್ರಹಿಸಿದ ಬಿಜೆಪಿ

Prasthutha|

ನವದೆಹಲಿ: ನಿಮ್ಮ ನಾಯಿಯಾದರೂ ದೇಶಕ್ಕಾಗಿ ಪ್ರಾಣ ಬಿಟ್ಟಿದೆಯೇ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ನಡೆದ ತೀವ್ರ ವಾಗ್ವಾದದ ನಡುವೆ ಲೋಕಸಭಾ ಕಲಾಪವನ್ನು ಮಂಗಳವಾರ ಬೆಳಿಗ್ಗೆ 11.30 ರವರೆಗೆ ಮುಂದೂಡಲಾಯಿತು.

- Advertisement -

ಭಾರತ್ ಜೋಡೋ ಯಾತ್ರೆ ಸಲುವಾಗಿ ರಾಜಸ್ಥಾನದ ಅಲ್ವಾರ್ ರ್‍ಯಾಲಿಯಲ್ಲಿ  ಮಾತನಾಡಿದ್ದ ಖರ್ಗೆ, ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ಅನೇಕರನ್ನು ಬಲಿಕೊಟ್ಟಿದೆ. ಆದರೆ  ಬಿಜೆಪಿ ಯಾರನ್ನೂ ಕಳೆದುಕೊಂಡಿಲ್ಲ ಎಂಬ ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಮುಂತಾದ  ಕಾಂಗ್ರೆಸ್ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನಿಮ್ಮ ಮನೆಯಲ್ಲಿರುವ  ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ? ಆದರೂ, ತಾವು ದೇಶಭಕ್ತರು ಎಂದು ಹೇಳಿಕೊಳ್ಳುತ್ತಿರುವ ಅವರು, ಕಾಂಗ್ರೆಸ್ಸಿಗರಾದ ನಾವು ಏನನ್ನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ (ದೇಶವಿರೋಧಿಗಳು) ಎಂದು ಕರೆಯುತ್ತಾರೆ” ಎಂದು ಹೇಳಿದ್ದರು.

- Advertisement -

ಇದಕ್ಕೆ ಆಕ್ರೋಶವ್ಯಕ್ತಪಡಿಸಿರುವ ಬಿಜೆಪಿ, ಮಂಗಳವಾರ ಸಂಸತ್ತು ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್  ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.



Join Whatsapp