ಜನರ ಕಲ್ಯಾಣ, ಪ್ರಗತಿಯೇ ಕಾಂಗ್ರೆಸ್ ಉದ್ದೇಶ: ಮಲ್ಲಿಕಾರ್ಜುನ ಖರ್ಗೆ

Prasthutha|


ನವದೆಹಲಿ: ‘ಜನರ ಕಲ್ಯಾಣ ಹಾಗೂ ದೇಶದ ಪ್ರಗತಿಯೇ ನಮ್ಮ ಪಕ್ಷದ ಉದ್ದೇಶ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

- Advertisement -


ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನದ ಅಂಗವಾಗಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಖರ್ಗೆ, ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಆಧಾರದ ಮೇಲೆ ದೇಶವನ್ನು ನಿರ್ಮಾಣ ಮಾಡಲು ಕಾಂಗ್ರೆಸ್ ನಿರಂತರವಾಗಿ ಶ್ರಮಿಸಿದೆ ಎಂದಿದ್ದಾರೆ.


‘ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಮತ್ತು ಸಾಂವಿಧಾನಿಕವಾಗಿ ಪ್ರತಿಪಾದಿಸಲಾಗಿರುವ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಒದಗಿಸುವ ಸಂಸದೀಯ ಪ್ರಜಾಪ್ರಭುತ್ವವನ್ನೊಳಗೊಂಡ ಭಾರತದ ಮೇಲೆ ನಂಬಿಕೆ ಇರಿಸಿದ್ದೇವೆ. ಅಂತಹ ಭಾರತವನ್ನು ಕಟ್ಟಲು ಕಳೆದ 138 ವರ್ಷಗಳಿಂದ ಸಂಪೂರ್ಣ ಪ್ರಾಮಾಣಿಕತೆಯಿಂದ ಹೋರಾಡುತ್ತಿದ್ದೇವೆ ಎಂಬುದಕ್ಕೆ ನಮಗೆ ಹೆಮ್ಮೆಯಿದೆ’ ಎಂದು ಬರೆದುಕೊಂಡಿದ್ದಾರೆ.



Join Whatsapp