‘ಕೆಜಿಎಫ್​ 2’ ಹಿಂದಿಕ್ಕಿ ಅತಿ ಹೆಚ್ಚು ಗಳಿಕೆ ಮಾಡಿದ ‘ಜವಾನ್​’ ಸಿನಿಮಾ

Prasthutha|

- Advertisement -

ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಕಾಂಬೋದಲ್ಲಿ ಮೂಡಿಬಂದ ‘ಜವಾನ್’​ ಸಿನಿಮಾ ಸೆಪ್ಟೆಂಬರ್​ ​ 7 ರಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ.

ಶಾರುಖ್​ ಖಾನ್​ ಅವರ ‘ಜವಾನ್’​ ಚಿತ್ರ ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ. ಬಾಹುಬಲಿ 2, ಗದರ್​ 2 ಮತ್ತು ಪಠಾಣ್​ ನಂತರ ‘ಜವಾನ್’​ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಿತ್ರವಾಗಿದೆ. ಭಾರಿ ಕಲೆಕ್ಷನ್​ ಮಾಡುವ ಮೂಲಕ ಯಶ್​ ಅವರ ಕೆಜಿಎಫ್​ 2 ಅನ್ನು ಹಿಂದಿಕ್ಕಿದೆ.

- Advertisement -

ಜವಾನ್​’ ಸಿನಿಮಾ ಶುಕ್ರವಾರ 18.10 ಕೋಟಿ ರೂಪಾಯಿ, ಶನಿವಾರ 30.10 ಕೋಟಿ ರೂ., ಭಾನುವಾರ 34.26 ಕೋಟಿ ರೂ., ಸೋಮವಾರ 14.25 ಕೋಟಿ ರೂಪಾಯಿ ಗಳಿಸಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಇದುವರೆಗೆ ಒಟ್ಟು 444.69 ಕೋಟಿ ರೂಪಾಯಿ ಗಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಜವಾನ್​ ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರಲಿದೆ ಎಂದು ವಿಶ್ಲೇಷಕ ತರಣ್​ ಆದರ್ಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Join Whatsapp