‘KGF’ ಖ್ಯಾತಿಯ ತಾತ ಕೃಷ್ಣ ಜಿ. ರಾವ್ ನಿಧನ

Prasthutha|

ಬೆಂಗಳೂರು: ‘ಕೆಜಿಎಫ್’ ತಾತ ಎಂದೇ ಖ್ಯಾತಿಯಾಗಿದ್ದ ಕೃಷ್ಣ ರಾವ್ ಅವರು ಇಂದು ನಿಧನರಾಗಿದ್ದಾರೆ.

- Advertisement -


ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ.


ಕೃಷ್ಣ ರಾವ್ ಅವರು ನಟ ಶಂಕರ್ ನಾಗ್ ಕಾಲದಿಂದಲೂ ಚಿತ್ರರಂಗದಲ್ಲಿದ್ದು, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳಲ್ಲಿ ಕೃಷ್ಣ ರಾವ್ ಅವರು ನಟಿಸಿದ ಬಳಿಕ ಖ್ಯಾತಿ ಪಡೆದುಕೊಂಡರು. ಈ ಚಿತ್ರಗಳಿಂದ ಅವರು ಕೆಜಿಎಫ್ ತಾತ ಎಂದು ಪ್ರಸಿದ್ಧರಾದರು. ಕೆಜಿಎಫ್ 2 ಚಿತ್ರದಲ್ಲಿನ ಅವರ ಡೈಲಾಗ್’ಗೆ ಫ್ಯಾನ್ಸ್ ಫಿದಾ ಆಗಿದ್ದರು.

- Advertisement -


ಸದ್ಯ ಕೃಷ್ಣ ರಾವ್ ಅವರ ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp