ಸಾಂಕ್ರಾಮಿಕ ರೋಗದ ಉಲ್ಭಣ | ಕೇರಳದಲ್ಲಿ ಜನನ ಪ್ರಮಾಣ ತೀವ್ರ ಕುಸಿತ

Prasthutha|

ತಿರುವನಂತಪುರ: ಕೇರಳದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳುತ್ತಿರುವ ಪರಿಣಾಮ ಜನನ ಪ್ರಮಾಣದಲ್ಲಿ ತೀವ್ರ ಕುಸಿತವನ್ನು ಕಂಡಿದೆ ಎಂದು ಅಂಕಿ ಅಂಶವೊಂದು ತಿಳಿಸಿದೆ. 2021 ರ ಮೊದಲ ಒಂಬತ್ತು ತಿಂಗಳಲ್ಲಿ ಜನನ ಪ್ರಮಾಣದಲ್ಲಿ ಕೆರಳ ರಾಜ್ಯವು ತೀವ್ರ ಕುಸಿತವನ್ನು ಕಂಡಿದೆ ಎಂದು ಮುಖ್ಯ ಜನನ ಮತ್ತು ಮರಣ ನೋಂದಣಿದಾರರ ತಿಳಿಸಿವೆ.

- Advertisement -

ಸಾಂಕ್ರಾಮಿಕ ಪೂರ್ವ ವರ್ಷದಲ್ಲಿ 4.80 ಲಕ್ಷ ಜನನಗಳು ದಾಖಲಾಗಿವೆ, ಇದು 2020 ರಲ್ಲಿ 4.53 ಲಕ್ಷಕ್ಕೆ ಇಳಿದಿದೆ. ಈ ವರ್ಷ ಸೆಪ್ಟೆಂಬರ್ 30 ವೇಳೆಗೆ ಇದು 2.17 ಲಕ್ಷಕ್ಕೆ ಇಳಿಯಿತು. ಮೊದಲ ಆರು ತಿಂಗಳಲ್ಲಿ, ನೋಂದಣಿಯಾದ ಜನನಗಳ ಸಂಖ್ಯೆಯು ಕನಿಷ್ಠ 27,534 (ಫೆಬ್ರವರಿಯಲ್ಲಿ) ರಿಂದ ಗರಿಷ್ಠ 32,969 (ಜೂನ್) ವರೆಗೆ ಇತ್ತು. ಆದಾಗ್ಯೂ, ಅಂದಿನಿಂದ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಜನನಗಳ ಸರಾಸರಿ 10,000 ಆಗಿದ್ದು ಸೆಪ್ಟೆಂಬರ್ 12,227 ನೋಂದಣಿ ಆಗಿದೆ.

ಅಂಕಿಅಂಶಗಳ ಪ್ರಕಾರ 2021 ಕಳೆದ ಒಂದು ದಶಕದಲ್ಲಿ ಕೇರಳದಲ್ಲಿ ಜನನ ವರ್ಷದಿಂದ ವರ್ಷಕ್ಕೆ ಅತಿದೊಡ್ಡ ಕುಸಿತಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿವೆ. ಮುಂಬರುವ ವರ್ಷಗಳಲ್ಲಿ ಕೇರಳದ ಜನಸಂಖ್ಯಾಶಾಸ್ತ್ರದ ಮೇಲೆ ದೂರಗಾಮಿ ಪರಿಣಾಮವನ್ನು ಇದು ಬೀರಲಿವೆ ಎನ್ನಲಾಗಿದೆ.



Join Whatsapp