ಸೌದಿಯಲ್ಲಿ ಕೇರಳ ಮೂಲದ ಯುವಕನ ಬರ್ಬರ ಹತ್ಯೆ

Prasthutha: June 16, 2021

ದಮ್ಮಾಮ್: ಪೂರ್ವ ಸೌದಿಯಲ್ಲಿ ಕೇರಳದ ಯುವಕನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕನನ್ನು ಕೇರಳದ ಕೊಲ್ಲಂ ಇತ್ತಿಕ್ಕರಾ ಮೂಲದ ಸನಲ್(35) ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದ ಪ್ರಮುಖ ಕಂಪೆನಿಯೊಂದರಲ್ಲಿ ಹಾಲು ವಿತರಣಾ ವ್ಯಾನ್ ನಲ್ಲಿ ಕೆಲಸ ಮಾಡುತ್ತಿದ್ದ ಮಲಯಾಳಿ ಸೇಲ್ಸ್ ಮ್ಯಾನ್ ಅನ್ನು ಘಾನಾ ಮೂಲದ ಆತನ ಸಹಾಯಕನೇ ಇರಿದು ಹತ್ಯೆಗೈದಿದ್ದಾನೆ.

ಅಲ್-ಅಹ್ಸಾದ ಜಬಲ್ ಶಹಬಾ ಬಳಿ ಇಂದು(ಬುಧವಾರ) ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಕೆಲಸದ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ವರದಿಯಾಗಿದೆ. ಸನಲ್ ಆರು ವರ್ಷಗಳಿಂದ ವಿದೇಶದಲ್ಲಿ ದುಡಿಯುತ್ತಿದ್ದರು. ಕೊಲೆ ನಡೆಸಿದ ಘಾನಾ ಮೂಲದವನು ಕೂಡ ಗಂಟಲು ಸೀಳಿಕೊಂಡು ಗಂಭೀರ ಸ್ಥಿತಿಯಲ್ಲಿದ್ದಾನೆ ಎನ್ನಲಾಗಿದೆ.

ಒರಟು ಸ್ವಭಾವದವನಾದ ಘಾನಾ ನಿವಾಸಿಯನ್ನು ಕೆಲಸಕ್ಕೆ ಜೊತೆಯಲ್ಲಿ ಯಾರೂ ಸೇರಿಸುತ್ತಿರಲಿಲ್ಲ. ಆದರೆ ಕೊಲ್ಲಲ್ಪಟ್ಟ ಸನಲ್ ಅವನನ್ನು ಸಹಾಯಕನಾಗಿ ಇರಿಸಿದ್ದನು ಎಂದು ತಿಳಿದುಬಂದಿದೆ. ಸನಲ್ ತಾಯಿ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ