ಕೇರಳ: ಕಾರಿನ ಮೇಲೆ ಬಂಡೆ ಉರುಳಿ ಬಿದ್ದು ಮಹಿಳೆ ಸಾವು

Prasthutha|

ಇಡುಕ್ಕಿ: ಕೇರಳದ ಗುಡ್ಡಗಾಡು ಪ್ರದೇಶವಾದ ಕುಟ್ಟಿಕ್ಕಾನಂ-ವಲಂಜಗನಂ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಬಂಡೆಯೊಂದು ಬಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಐವರು ಅಪಘಾತದಲ್ಲಿ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಡುಕ್ಕಿ ನಿವಾಸಿ ಸೋಮಿನಿ (66) ಅವರು ಮತ್ತೊಂದು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ವಾಹನವನ್ನು ಮಾರ್ಗದಲ್ಲಿ ನಿಲ್ಲಿಸಿದಾಗ ಕೆಸರು ಸಹಿತ ಬಂಡೆಯು ಕಾರಿನ ಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp