ಭೂಕುಸಿತದ ಬಗ್ಗೆ ಕೇರಳಕ್ಕೆ ಮುನ್ನೆಚ್ಚರಿಕೆ ನೀಡಲಾಗಿತ್ತು, ಅಲ್ಲಿನ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ: ಅಮಿತ್ ಶಾ

Prasthutha|

ನವದೆಹಲಿ: ಕೇರಳ ರಾಜ್ಯಕ್ಕೆ ಜುಲೈ 23 ರಿಂದ 26ರವರೆಗೂ ಕೇಂದ್ರ ಸರ್ಕಾರದಿಂದ ಭಾರೀ ಮಳೆಯ ಅಲರ್ಟ್ ಗಳನ್ನು ನೀಡಿದ್ದೆವು. ಅಲ್ಲದೆ, ಭೂಕುಸಿತವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದೆವು. ಹಾಗಿದ್ದರೂ ಅಲ್ಲಿನ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೇ ಇರುವುದರಿಂದ ಈ ಹಾನಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

- Advertisement -


ಸಂಸತ್ ನಲ್ಲಿ ಮಾತನಾಡಿದ ಅಮಿತ್ ಶಾ, ಕೇರಳ ಭೂಕುಸಿತದ ಬಗ್ಗೆ ಭಾರತ ಸರ್ಕಾರದ ಹೇಳಿಕೆಯನ್ನು ಸಚಿವ ನಿತ್ಯಾನಂದ ರೈ ಅವರೇ ತಿಳಿಸಲಿದ್ದಾರೆ. ಆದರೆ, ನಾನು ಇಲ್ಲಿ ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಘಟನೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೋ, ಗಾಯಾಳುವಾಗಿದ್ದಾರೂ ಈ ಪರಿವಾರಗಳಿಗೆ ಭಾರತ ಸರ್ಕಾರ ಸಂತಾಪ ಸೂಚಿಸುತ್ತದೆ ಎಂದು ಹೇಳಿದ್ದಾರೆ.


ಭೂಕುಸಿತದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ನಾನು ಬಯಸಿದ್ದೆ. ಈ ಕುರಿತಾದ ಟೀಕೆಗಳು ಆಗಬಾರದು ಎನ್ನುವುದು ನಮ್ಮ ಆಶಯವಾಗಿತ್ತು. ಆದರೆ, ನಮ್ಮ ವಿರುದ್ಧವೇ ಕೆಲವು ಟೀಕೆಗಳು ಬಂದಿವೆ. ಈ ವಿಚಾರದಲ್ಲಿ ದೇಶದ ಜನರಿಗೆ ತಪ್ಪು ಸಂದೇಶ ಹೋಗಬಾರದು ಎನ್ನುವ ನಿಟ್ಟಿನಲ್ಲಿ ನಾನು ಕೆಲವು ಸ್ಪಷ್ಟನೆಗಳನ್ನು ನೀಡಲು ಬಯಸುತ್ತೇನೆ. ದೋಷಾರೋಪಣೆಯೋ ಅಥವಾ ಅವರಿಗೆ ಮಾಹಿತಿ ಇಲ್ಲವೋ ಗೊತ್ತಿಲ್ಲ. ವಿಪಕ್ಷಗಳು ಎಲ್ಲಾ ಸದಸ್ಯರು ‘ಮುನ್ನೆಚ್ಚರಿಕೆ..’ ಅನ್ನೋ ಶಬ್ದವನ್ನು ಬಳಸುತ್ತಲೇ ಹೋಗಿದ್ದಾರೆ. ಇಂಗ್ಲೀಷ್ ನಲ್ಲಿ ಎಷ್ಟು ಗಂಭೀರ ಪ್ರಮಾಣದ ಶಬ್ದಗಳಿವೆಯೋ ಅವೆಲ್ಲವನ್ನೂ ವಿಪಕ್ಷಗಳು ಬಳಸಿವೆ ಎಂದಿದ್ದಾರೆ.



Join Whatsapp