ಕೇರಳದಲ್ಲಿ ರೈಲಲ್ಲಿ ಬೆಂಕಿ ಹಚ್ಚಿದ ಪ್ರಕರಣ: ರತ್ನಗಿರಿಯಲ್ಲಿ ಆರೋಪಿಯ ಬಂಧನ

Prasthutha|

ಮುಂಬೈ: ರೈಲು ಹತ್ತುವ ಕ್ಷುಲ್ಲಕ ಕಾರಣಕ್ಕೆ ರೈಲಿನಲ್ಲಿ ಮೂವರು ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.

- Advertisement -


ಮಹಾರಾಷ್ಟ್ರದ ಎಟಿಎಸ್- ಉಗ್ರ ನಿಗ್ರಹ ತಂಡವು ಕೇಂದ್ರೀಯ ತನಿಖಾ ತಂಡದವರ ಸಹಕಾರದೊಂದಿಗೆ ರತ್ನಗಿರಿಯ ರೈಲು ನಿಲ್ದಾಣದಲ್ಲಿ ಆರೋಪಿ ಶಾರೂಕ್ ಶೈಫಿಯನ್ನು ಬಂಧಿಸಿರುವುದಾಗಿ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿ ಹೇಳಿದ್ದಾರೆ.
“ಕೇಂದ್ರೀಯ ತನಿಖಾ ಸಂಸ್ಥೆಗಳು ನೀಡಿದ ಮಾಹಿತಿಯ ಮೇಲೆ ನಾವು ಆತನನ್ನು ಬಂಧಿಸಿದೆವು. ಆತ ನಮ್ಮಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ನಾವು ಆತನನ್ನು ಕೇರಳ ಪೊಲೀಸರಿಗೆ ಒಪ್ಪಿಸಲಿದ್ದೇವೆ” ಎಂದೂ ಅವರು ಹೇಳಿದರು.


ಕಾರ್ಪೆಂಟರ್ ಆಗಿರುವ 30 ಹರೆಯದ ಸೈಫಿ ಮಂಗಳವಾರ ರಾತ್ರಿ ಹನ್ನೊಂದೂವರೆ ಗಂಟೆಗೆ ರತ್ನಗಿರಿ ರೈಲು ನಿಲ್ದಾಣದಲ್ಲಿ ಮಲಗಿದ್ದ. ಆತನಿಗೂ ಸುಟ್ಟ ಗಾಯವಾಗಿದ್ದು, ರತ್ನಗಿರಿ ಸಿವಿಕ್ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಪಡೆದು, ಅನಂತರ ನಾಪತ್ತೆಯಾಗಿದ್ದ.

- Advertisement -


ಏಪ್ರಿಲ್ 2ರ ರಾತ್ರಿ ಕಣ್ಣೂರಿಗೆ ಹೋಗುತ್ತಿದ್ದ ಅಲಪ್ಪುಝ ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ ಪ್ರೆಸ್ ಹತ್ತಿದ ಅಪರಿಚಿತ ವ್ಯಕ್ತಿಯು ವಾಗ್ವಾದ ಮಾಡಿ, ಒಬ್ಬರ ಮೇಲೆ ಉರಿಯುವ ದ್ರವ ಸುರಿದು ಬೆಂಕಿ ಹಚ್ಚಿದ್ದ. ಇದರಿಂದ ಒಂಬತ್ತು ಜನರು ತೀವ್ರ ಸುಟ್ಟ ಗಾಯಕ್ಕೆ ಒಳಗಾದರೆ, ಮೂವರು ಭಯದಿಂದ ಕೆಳಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಆತನ ಬ್ಯಾಗಿನಲ್ಲಿ ಹಿಂದಿಯ ಕೆಲವು ಬರಹ ಮತ್ತು ಉತ್ತರ ಪ್ರದೇಶದ ಒಬ್ಬರ ಸಂಪರ್ಕ ಸಂಖ್ಯೆ ಇತ್ತು.
ಸಾಕ್ಷಿಗಳ ಹೇಳಿಕೆಯ ಮೇಲೆ ಕೇರಳ ಪೊಲೀಸರು ಅನುಮಾನಿತನ ಚಿತ್ರ ಬಿಡಿಸಿದ್ದರು. ಹಲವು ತಂಡಗಳನ್ನು ಸಹ ಅಪರಾಧಿಯ ಪತ್ತೆಗೆ ರಚಿಸಿದ್ದರು. ಉತ್ತರ ಪ್ರದೇಶ, ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು.



Join Whatsapp