ರಾಗ ಬದಲಿಸಿದ ‘ದಿ ಕೇರಳ ಸ್ಟೋರಿ’ ಚಿತ್ರ ತಂಡ | ಮತಾಂತರಗೊಂಡ ಯುವತಿಯರ ಸಂಖ್ಯೆ 32 ಸಾವಿರದಿಂದ 3ಕ್ಕೆ ಇಳಿಕೆ!

Prasthutha|

ಮುಂಬೈ: ಕಪೋಲಕಲ್ಪಿತ ಕಥೆ ಹಾಗೂ ಕೇರಳ ರಾಜ್ಯಕ್ಕೇ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಮಾಡಲಾಗಿರುವ ಸಿನಿಮಾ ಎನ್ನುವ ಆರೋಪವನ್ನು ಎದುರಿಸುತ್ತಿರುವ ‘ದಿ ಕೇರಳ ಸ್ಟೋರಿ’ ಚಿತ್ರ ತಂಡವು ಇದೀಗ ತನ್ನ ರಾಗವನ್ನು ಬದಲಿಸಿದೆ.

- Advertisement -

ಇದು ಸತ್ಯ ಘಟನೆ ಆಧಾರಿತ ಚಿತ್ರ ಎಂದು ಹೇಳಿಕೊಂಡಿದ್ದ ಚಿತ್ರ ತಂಡ, ಕೇರಳದಿಂದ 32 ಸಾವಿರ ಮಹಿಳೆಯರು ಮತಾಂತರವಾಗಿ ಐಸಿಸ್ ಸೇರಿದ್ದಾರೆ ಎಂದು ವಾದಿಸಿತ್ತು. ಆದರೆ ಇದೀಗ ವಿವಾದವಾಗುತ್ತಿದ್ದಂತೆಯೇ 32 ಸಾವಿರ ಯುವತಿಯರ ಬದಲು 3 ಯುವತಿಯರು ಮತಾಂತರವಾಗಿ ಐಸಿಸ್ ಸೇರಿದ್ದಾರೆ ಎಂದು ಬದಲಾಯಿಸಿದೆ.

ಚಿತ್ರತಂಡವು ಟ್ರೇಲರ್ನ YouTube ಡಿಸ್ಕ್ರಿಪ್ಷನ್ ನಲ್ಲಿ ಮೊದಲು 32,000 ಯುವತಿಯರು ಎಂದು ಬರೆದಿತ್ತು, ಈಗ 3 ಯುವತಿಯರು ಎಂದು ತಿದ್ದುಪಡಿ ಮಾಡಿದೆ.

- Advertisement -

ಈ ಸಿನಿಮಾ ವಿರುದ್ಧ ಕೇರಳ ಸೇರಿದಂತೆ ವಿವಿಧೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಚಿತ್ರಕ್ಕೆ ತಡೆನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಕೆಯಾಗಿತ್ತು.



Join Whatsapp