ಕೇರಳ: ‘ಮಹಾಬಲಿ’ ವೇಷ ಧರಿಸಿ ಬಂದ ಎಸ್ ಬಿಐ ಬ್ಯಾಂಕ್ ಸಿಬ್ಬಂದಿ

Prasthutha|

ಕೇರಳ: ಓಣಂ ಹಬ್ಬದ ದಿನ ಕೇರಳದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ಮಹಾಬಲಿಯಂತೆ ವೇಷ ಧರಿಸಿ ಬಂದು ಕರ್ತವ್ಯನಿರತರಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

- Advertisement -

ಕೇರಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತಲಶ್ಶೇರಿಯ ಉದ್ಯೋಗಿಯೇ ಈ ವೇಷ ಧರಿಸಿ ಬಂದಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹಬ್ಬದ ದಿನವೂ ವ್ಯಕ್ತಿಯ ವೃತ್ತಿಬದ್ಧತೆ ಅದ್ಭುತ!’ ಎಂದು ಟ್ವಿಟರ್ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ಉದ್ಯೋಗಿಯು ಇಂಥ ಉಡುಗೆ ಧರಿಸಿದ್ದನ್ನು ಟೀಕಿಸಿದ್ದಾರೆ.

- Advertisement -

ಆಗಸ್ಟ್ 30ರಿಂದ ಪ್ರಾರಂಭವಾದ ಓಣಂ ಹಬ್ಬ ಸೆಪ್ಟೆಂಬರ್ 8ರಂದು ಮುಗಿಯುತ್ತದೆ.

Join Whatsapp