ಕೇರಳದ ಆಸ್ಪತ್ರೆ ತ್ಯಾಜ್ಯ ಕರ್ನಾಟಕದಲ್ಲಿ ವಿಲೇವಾರಿಗೆ ಯತ್ನ: ಲಾರಿ ಚಾಲಕ ವಶಕ್ಕೆ

Prasthutha|

ಚಾಮರಾಜನಗರ: ಕೇರಳದಿಂದ ಮತ್ತೆ ಕರ್ನಾಟಕಕ್ಕೆ ಕಸ ತರುತ್ತಿರುವ ಲಾರಿಯನ್ನು ಜನರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

- Advertisement -

ಕೇರಳದಿಂದ ಗುಂಡ್ಲುಪೇಟೆಗೆ ಅಕ್ರಮವಾಗಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದಿದ್ದ ಲಾರಿಯನ್ನು ಜನರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಮಾಡ್ರಹಳ್ಳಿ ರಸ್ತೆಯಲ್ಲಿ ಕೇರಳ ನೋಂದಣಿಯ ಲಾರಿಯೊಂದು ನಿಂತಿದ್ದ ವೇಳೆ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಲಾರಿಯಲ್ಲಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯದ ಮೂಟೆಗಳು ಇರುವುದು ಕಂಡು ಬಂದಿದ್ದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

Join Whatsapp