ಬಿಜೆಪಿ ಜೊತೆ ವಿಲೀನವಾದ ಪಿಸಿ ಜಾರ್ಜ್ ನೇತೃತ್ವದ ‘ಕೇರಳ ಜನಪಕ್ಷಂ(ಜಾತ್ಯತೀತ)’

Prasthutha|

ನವದೆಹಲಿ: ಏಳು ಬಾರಿ ಕೇರಳದ ಶಾಸಕರಾಗಿದ್ದ ಪಿಸಿ ಜಾರ್ಜ್ ಅವರ ಕೇರಳ ಜನಪಕ್ಷಂ (ಜಾತ್ಯತೀತ) ಬಿಜೆಪಿಯೊಂದಿಗೆ ವಿಲೀನಗೊಂಡಿದೆ.ಕೇರಳದ ಚರ್ಚ್‌ಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂಬುದನ್ನು ತಮ್ಮ ಪಕ್ಷ ನಿರ್ಧರಿಸಲಿದೆ ಎಂದು ಪಿಸಿ ಜಾರ್ಜ್ ಹೇಳಿದ್ದಾರೆ.

- Advertisement -

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ವಿ. ಮುರಳೀಧರನ್, ಬಿಜೆಪಿ ನಾಯಕರಾದ ಪ್ರಕಾಶ್ ಜಾವಡೇಕರ್ ಮತ್ತು ಅನಿಲ್ ಆಂಟನಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಿಸಿ ಜಾರ್ಜ್ ಅವರನ್ನು ಬರಮಾಡಿಕೊಂಡರು. ಪಿಸಿ ಜಾರ್ಜ್ ಅವರ ಪುತ್ರ ಹಾಗೂ ಕೊಟ್ಟಾಯಂ ಜಿಲ್ಲಾ ಪಂಚಾಯತ್ ಸದಸ್ಯ ಶಾನ್ ಜಾರ್ಜ್ ಕೂಡ ಬಿಜೆಪಿಗೆ ಸೇರ್ಪಡೆಯಾದರು.

ಇದು ಆರಂಭವಷ್ಟೇ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದು, ಭವಿಷ್ಯದಲ್ಲಿ ಕೇರಳದ ಇನ್ನಷ್ಟು ನಾಯಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.



Join Whatsapp