ಕೇರಳ ಮುಸ್ಲಿಂ ಜಮಾತ್‌ನ ಪ್ರತಿಭಟನೆಗೆ ಮಣಿದ ಸರಕಾರ: ಕೊಲೆಪ್ರಕರಣದ ಆರೋಪಿ, ಜಿಲ್ಲಾಧಿಕಾರಿ ಹುದ್ದೆಯಿಂದ ವಜಾ

Prasthutha|

ಆಲಪ್ಪುಝ: ಕೇರಳದ ಸಿರಾಜ್ ದೈನಿಕ ಪತ್ರಿಕೆಯ ತಿರುವನಂತಪುರ ಘಟಕದ ಮುಖ್ಯಸ್ಥ, ಕೆ.ಎಂ.ಬಶೀರ್ ಅವರನ್ನು ಕುಡಿದ ಮತ್ತಿನಲ್ಲಿ ಕಾರು ಡಿಕ್ಕಿ ಹೊಡೆದು ಕೊಂದ ಪ್ರಕರಣದ ಪ್ರಮುಖ ಆರೋಪಿ, ಶ್ರೀರಾಮ್ ವೆಂಕಿಟರಾಮನ್ ಅವರನ್ನು ಕೇರಳ ಸರಕಾರ ಆಲಪ್ಪುಝ ಜಿಲ್ಲಾಧಿಕಾರಿ ಹುದ್ದೆಯಿಂದ ವಜಾಗೊಳಿಸಿದೆ. ಕೇರಳ ಮುಸ್ಲಿಂ ಜಮಾತ್ ನೇತೃತ್ವದಲ್ಲಿ ನಡೆದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ಜಿಲ್ಲಾಧಿಕಾರಿ ನೇಮಕ ಕುರಿತು ಕೇರಳ ಜರ್ನಲಿಸ್ಟ್ ಯೂನಿಯನ್ ಕೂಡ ಇತ್ತೀಚಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಶ್ರೀರಾಮ್ ಅಧಿಕಾರ ಸ್ವೀಕರಿಸಿದ ದಿನವೇ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್, ಕಮ್ಯುನಿಷ್ಟ್ ಸರಕಾರಕ್ಕೆ ಬಹಿಷ್ಕಾರ ಕೂಗಿದೆ. ಶ್ರೀರಾಮ್ ಪದಗ್ರಹಣದ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಹಾರಿಸಿ ಪ್ರತಿಭಟನೆಯನ್ನೂ ನಡೆಸಿದ್ದರು

ಐಎಎಸ್ ಮಟ್ಟದಲ್ಲಿ ಅಪನಗದೀಕರಣ ಪ್ರಕ್ರಿಯೆಯ ಭಾಗವಾಗಿ ಕಳೆದ ವಾರ ಶ್ರೀರಾಮ್ ಅವರನ್ನು ಅಲಪ್ಪುಳ ಜಿಲ್ಲಾಧಿಕಾರಿಯನ್ನಾಗಿ ಮಾಡಲಾಗಿತ್ತು. ಆದರೆ, ಕೇರಳ ಮುಸ್ಲಿಂ ಜಮಾತ್, ಮಾಧ್ಯಮಗಳು ಮತ್ತು ಸಾರ್ವಜನಿಕರು ಇದರ ವಿರುದ್ಧ ತೀವ್ರ ಪ್ರತಿಭಟನೆಯನ್ನು ನಡೆಸಿದ್ದರು.

- Advertisement -


ಸೋಶಿಯಲ್ ಮೀಡಿಯಾಗಳಲ್ಲೂ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ಕೇರಳಾದ್ಯಂತ ಪ್ರತಿಭಟನೆಗಳೂ ನಡೆದಿದ್ದವು. ಶನಿವಾರದಂದು ಕೇರಳ ಮುಸ್ಲಿಂ ಜಮಾತ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ಸೆಕ್ರೆಟರಿಯೇಟ್ ಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಲಾಯಿತು. ಶ್ರೀರಾಮ್ ಅವರು ಕಳೆದ ಸೋಮವಾರ ಅಧಿಕಾರ ವಹಿಸಿಕೊಂಡಿದ್ದು ಇದರ ವಿರುದ್ಧ ಕೇರಳೀಯ ಜನರು ಒಕ್ಕೊರಲಿನಿಂದ ಧ್ವನಿ ಎತ್ತಿದ್ದರು.

ಕೇರಳ ಮುಸ್ಲಿಂ ಜಮಾತ್‌ನ ತೀವ್ರ ಪ್ರತಿಭಟನೆಗೆ ಮಣಿದ ಕೇರಳ ಸರಕಾರ ಇಂದು ಶ್ರೀರಾಮ್ ವೆಂಕಿಟರಾಮನ್ ಅವರನ್ನು ಆಲಪ್ಪುಝ ಜಿಲ್ಲಾಧಿಕಾರಿ ಹುದ್ದೆಯಿಂದ ವಜಾಗೊಳಿಸಿ ಆ ಸ್ಥಾನಕ್ಕೆ ವಿಆರ್ ಕೃಷ್ಣ ತೇಜ ಅವರನ್ನು ನೂತನ ಅಲಪ್ಪುಝ ಕಲೆಕ್ಟರ್ ಆಗಿ ನೇಮಕ ಮಾಡಿದೆ

Join Whatsapp