ಕೇರಳ: ಇತ್ತೀಚೆಗೆ ಕೇರಳದಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಕಾರಣವಾದ ವಕ್ಫ್ ಬೋರ್ಡ್‌ಗೆ ಪಿಎಸ್‌ಐ ಮೂಲಕ ನೇಮಕ ಮಸೂದೆಯನ್ನು ಕೇರಳ ಸರಕಾರ ಕೈ ಬಿಟ್ಟಿರುವುದಕ್ಕೆ ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಙಳ್ ಸಂತಸ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಮುಸ್ಲಿಂ ಧರ್ಮ ಗುರುಗಳಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ ಎಂದರು.
ಈ ಕುರಿತಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಫ್ರಿ ಮುತ್ತುಕೋಯ ತಙಳ್, ಸರಕಾರ ಈ ತೀರ್ಮಾನವನ್ನು ಕೈ ಬಿಟ್ಟಿರಿವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಪಿಎಸ್ಐ ಮೂಲಕ ವಕ್ಫ್ ಬೋರ್ಡ್ ಗೆ ನೇಮಕ ವಿವಾದವಾದ ಸಂದರ್ಭದಲ್ಲಿ ನಾವು ಮುಖ್ಯಮಂತ್ರಿಯನ್ನ ಸಂಪರ್ಕಿಸಿದಾಗ ಈ ವಿಚಾರದಲ್ಲಿ ಪೂರಕ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ನಾವು ಯಾವುದೇ ಪ್ರತಿಭಟನೆಗೆ ಕರೆ ನೀಡಿಲ್ಲ. ಆದರೆ ಇತರ ಮುಸ್ಲಿಂ ರಾಜಕೀಯ, ಧಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಅದು ಸಹಜ. ಆದರೆ ನಾವು ಯಾವುದೇ ಪ್ರತಿಭಟನೆ ಇಲ್ಲದೇ ನಮ್ಮ ಬೇಡಿಕೆ ಈಡೇರಿಸಿದ್ದೇವೆ ಎಂದು ತಙಳ್ ಹೇಳಿದ್ದಾರೆ.