ವಿದ್ಯಾರ್ಥಿಗಳಿಗೆ ವಾಟ್ಸ್ ಆ್ಯಪ್ ನಲ್ಲಿ ಮುದ್ರಿತ ನೋಟ್ಸ್ ಕಳಿಸುವಂತಿಲ್ಲ: ಶಿಕ್ಷಣ ಇಲಾಖೆಗೆ ನಿಷೇಧ ಹೇರಿದೆ ಕೇರಳ ಸರ್ಕಾರ

Prasthutha|

ತಿರುವನಂತಪುರ: ಕೇರಳದ ಉನ್ನತ ಮಾಧ್ಯಮಿಕ ಶಿಕ್ಷಣ ನಿರ್ದೇಶನಾಲಯವು ವಿದ್ಯಾರ್ಥಿಗಳಿಗೆ ಮುದ್ರಿತ ಹಾಗೂ ಕೈಬರಹದ ನೋಟ್ಸ್ ಗಳನ್ನು ವಾಟ್ಸ್ ಆ್ಯಪ್ ಸೇರಿದಂತೆ ಇತರೆ ಪ್ಲಾಟ್ಫಾರ್ಮ್ ಗಳ ಮೂಲಕ ಕಳಿಸುವುದನ್ನು ನಿಷೇಧಿಸಿದೆ.

- Advertisement -

ಈ ನಿರ್ದೇಶನವು ತರಗತಿಯ ಪರಿಸರದಲ್ಲಿ ಸಂಭವಿಸಬೇಕಾದ ಅಗತ್ಯ ಕಲಿಕೆಯ ಅನುಭವವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ಹಿನ್ನೆಲೆಯಿಂದ ಜಾರಿಗೊಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಈ ಹಿಂದೆ ಮಕ್ಕಳು ತರಗತಿಯಲ್ಲಿ ಶಿಕ್ಷಕರು ಹೇಳಿಕೊಡುತ್ತಿದ್ದ ಪಠ್ಯವನ್ನು ಕ್ಲಾಸ್ ನಲ್ಲಿಯೇ ಕಲಿಯಬೇಕಾಗಿತ್ತು. ಅಂದರೆ, ತರಗತಿಯ ಬೋರ್ಡ್ ನಲ್ಲಿ ಬರೆಯಲಾದ ಪಾಠವನ್ನು ಅಲ್ಲಿಯೇ ನೋಟ್ ಬುಕ್ ನಲ್ಲಿ ಬರೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಅದನ್ನೇ ಓದಿ, ಪರೀಕ್ಷೆಗೆ ಹಾಜರಾಗುತ್ತಿದ್ದರು. ಆದ್ರೆ, ಇದೀಗ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದ ಹಿನ್ನಲೆ ಶಿಕ್ಷಕರು ಮಕ್ಕಳಿಗೆ ಮುದ್ರಿತ ನೋಟ್ಸ್ ಗಳನ್ನು ವಾಟ್ಸ್ ಆ್ಯಪ್ ನಲ್ಲಿಯೇ ಕಳುಹಿಸುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಸದ್ಯ ಇದನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ, ಸಾಮಾಜಿಕ ಮಾಧ್ಯಮದ ಮೂಲಕ ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ನೋಟ್ಸ್ ಗಳನ್ನು ಕಳಿಸಬೇಡಿ, ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.



Join Whatsapp