Home ಟಾಪ್ ಸುದ್ದಿಗಳು ವಿಸಿಗಳ ನಂತರ ರಾಜ್ಯ ಹಣಕಾಸು ಸಚಿವರನ್ನು ತೆಗೆದು ಹಾಕಲು ಮನವಿ ಮಾಡಿದ ಕೇರಳ ರಾಜ್ಯಪಾಲ

ವಿಸಿಗಳ ನಂತರ ರಾಜ್ಯ ಹಣಕಾಸು ಸಚಿವರನ್ನು ತೆಗೆದು ಹಾಕಲು ಮನವಿ ಮಾಡಿದ ಕೇರಳ ರಾಜ್ಯಪಾಲ

ತಿರುವನಂತಪುರಂ: ಕೇರಳದಲ್ಲಿ ರಾಜ್ಯಪಾಲರ ಮತ್ತು ಸರ್ಕಾರದ ನಡುವಿನ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ವಿಸಿಗಳ ರಾಜೀನಾಮೆಗೆ ಒತ್ತಾಯಿಸಿದ ನಂತರ ಇದೀಗ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರ ರಾಜೀನಾಮೆಗೆ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್  ಒತ್ತಾಯಿಸಿದ್ದಾರೆ. 

ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಆರಿಫ್ ಮೊಹಮ್ಮದ್ ಖಾನ್ , ಪ್ರಮಾಣ ವಚನದ ಉಲ್ಲಂಘನೆಗಾಗಿ ಬಾಲಗೋಪಾಲ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಸಚಿವರಿಂದ ಯಾವುದೇ ಸಂವಿಧಾನ ವಿರೋಧಿ ಹೇಳಿಕೆ ಇಲ್ಲ . ಆದ್ದರಿಂದ, ಅವರನ್ನು ಸಂಪುಟದಿಂದ ತೆಗೆದುಹಾಕುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ರಾಜ್ಯಪಾಲರಿಗೆ ಉತ್ತರ ಕಳುಹಿಸಿದ್ದಾರೆ ಅಧಿಕೃತ ಮೂಲಗಳು ತಿಳಿಸಿವೆ.

Join Whatsapp
Exit mobile version