Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿ

ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಡೆಂಗ್ಯೂಗೆ 27 ವರ್ಷದ ಯುವಕ ಬಲಿಯಾಗಿರುವುದನ್ನು ಬಿಬಿಎಂಪಿ ಖಚಿತಪಡಿಸಿದೆ.


ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯೂ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಬಿಬಿಎಂಪಿ ಹೆಲ್ತ್ ಆಡಿಟ್ ದೃಢಪಡಿಸಿದೆ.


ಕಳೆದ ಶುಕ್ರವಾರ ಎರಡು ಡೆಂಗ್ಯೂ ಶಂಕಿತ ಸಾವು ಪ್ರಕರಣಗಳು ಸಂಭವಿಸಿತ್ತು. ಆ ಪೈಕಿ ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯೂ ಕಾರಣ. ಆದರೆ 80 ವರ್ಷದ ವೃದ್ಧೆಯ ಸಾವಿಗೆ ಡೆಂಗ್ಯೂ ಕಾರಣವಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಹೊಸದಾಗಿ 213 ಡೆಂಗ್ಯೂ ಪ್ರಕರಣಗಳ ಪತ್ತೆಯಾಗಿದೆ. ಜೂನ್ ತಿಂಗಳಲ್ಲಿ 1,742 ಜನ ಡೆಂಗ್ಯೂ ಸೊಂಕಿಗೆ ಒಳಗಾದಂತಾಗಿದೆ.

Join Whatsapp
Exit mobile version