Home ಟಾಪ್ ಸುದ್ದಿಗಳು ಗಣೇಶ-ಲಕ್ಷ್ಮಿ ಕರೆನ್ಸಿ ನೋಟುಗಳಿಗಾಗಿ ಎಎಪಿ ಮನವಿ: ರಾಜಕೀಯ ಗಿಮಿಕ್ ಎಂದ ಬಿಜೆಪಿ

ಗಣೇಶ-ಲಕ್ಷ್ಮಿ ಕರೆನ್ಸಿ ನೋಟುಗಳಿಗಾಗಿ ಎಎಪಿ ಮನವಿ: ರಾಜಕೀಯ ಗಿಮಿಕ್ ಎಂದ ಬಿಜೆಪಿ

ನವದೆಹಲಿ: ಕರೆನ್ಸಿ ನೋಟುಗಳ ಮೇಲೆ ಹಿಂದೂ ದೇವತೆಗಳಾದ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಹಾಕುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಬಿಜೆಪಿ,ಇದು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳಿಗೆ ಮುಂಚಿತವಾಗಿ ತೋರಿಸುತ್ತಿರುವ ರಾಜಕೀಯ ಗಿಮಿಕ್ ಎಂದಿದೆ.

ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಮತ್ತು ದೆಹಲಿ ಘಟಕದ ಮಾಜಿ ಮುಖ್ಯಸ್ಥ ಮನೋಜ್ ತಿವಾರಿ, ಗುಜರಾತಿನ   ಹಲವಾರು ಎಎಪಿ ಸಚಿವರು ಮತ್ತು ನಾಯಕರು ಈ ಹಿಂದೆ ಹಿಂದೂ ದೇವರುಗಳನ್ನು ನಿಂದಿಸಿದ್ದಾರೆ. ಆದರೆ ಅವರು ಇನ್ನೂ ಪಕ್ಷದಲ್ಲೇ ಇದ್ದಾರೆ. ರಾಮ ಮಂದಿರಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು  ಈಗ ಈ ರೀತಿ ಹೇಳುತ್ತಿರುವುದು ಚುಣಾವಣೆಗಾಗಿ ರೂಪಿಸುತ್ತಿರುವ ಹೊಸ ತಂತ್ರ ಎಂದರು.

ದೀಪಾವಳಿಯಂದು ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಿದ್ದ ಕೇಜ್ರಿವಾಲ್ ಅತಿಯಾದ ಹಿಂದೂವಾಗಲು ಪ್ರಯತ್ನಿಸುತ್ತಿದ್ದಾರೆ ಬಿಜೆಪಿ ನಾಯಕ ಸಂಬಿತ್ ಪಾತ್ರಾ ಹೇಳಿದ್ದಾರೆ.

Join Whatsapp
Exit mobile version