ತಿರುವನಂತಪುರ: ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್’ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ರೈತ ಬಿಜು ಕುರಿಯನ್ ಭಾರತಕ್ಕೆ ವಾಪಸಾಗಿದ್ದಾರೆ.
ಕೃಷಿ ತಂತ್ರಗಳ ಕುರಿತು ಅಧ್ಯಯನಕ್ಕೆಂದು ಕೇರಳ ರೈತ ನಿಯೋಗದ 28 ಸದಸ್ಯರು ಇಸ್ರೇಲ್’ಗೆ ತೆರಳಿದ್ದರು. ಈ ಭೇಟಿ ಪೂರ್ಣಗೊಳಿಸಿ ಫೆ.17 ಭಾರತಕ್ಕೆ ಹಿಂದಿರುಗಬೇಕಿತ್ತು. ಆದರೆ ಈ ಮಧ್ಯೆ ಪ್ರವಾಸಕ್ಕೆ ತೆರಳಿದ್ದ ಕಣ್ಣೂರು ಜಿಲ್ಲೆಯ ಉಲಿಕಲ್ ನಿವಾಸಿಯಾಗಿರುವ ಬಿಜು ಕುರಿಯನ್ ನಾಪತ್ತೆಯಾಗಿದ್ದರು. ಇದೀಗ ಸ್ಥಳೀಯರ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ.
ಭಾರತಕ್ಕೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜು ಕುರಿಯನ್, ಕೇರಳ ಸರ್ಕಾರ, ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ಹಾಗೂ 27ಸದಸ್ಯರ ನಿಯೋಗ, ಅಧಿಕಾರಿಗಳಿಗೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.