ಕೇರಳ ಬಿಜೆಪಿಯ ಗುಲಾಮಿ ಸಂಸ್ಕೃತಿ? ಅಭ್ಯರ್ಥಿಯ ಪಾದ ತೊಳೆದು ನಮಸ್ಕರಿಸಿದ ಮತದಾರರು!

Prasthutha|

ಪಾಲಕ್ಕಾಡ್ : ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಬಿಜೆಪಿಯ ಅಭ್ಯರ್ಥಿ ಇ ಶ್ರೀಧರನ್ ಅವರ ಪಾದ ತೊಳೆದು ನಮಸ್ಕರಿಸಿ ಸ್ವಾಗತಿಸುತ್ತಿರುವ ಚಿತ್ರವೊಂದು ವ್ಯಾಪಕ ವೈರಲ್ ಆಗಿದ್ದು ಭಾರೀ ಟೀಕೆಗಳಿಗೆ ಗುರಿಯಾಗಿದೆ.

- Advertisement -

ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಪಾಲಕ್ಕಾಡ್ ಕ್ಷೇತ್ರದ ಬಜೆಪಿಯ ಅಭ್ಯರ್ಥಿ ಇ.ಶ್ರೀಧರನ್ ಅವರ ಪಾದವನ್ನು ತೊಳೆದು ನಮಸ್ಕರಿಸಿ ಗುಲಾಮಗಿರಿಯ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿರುವ ಫೋಟೋದ ವಿರುದ್ಧ “ಕೇರಳದಲ್ಲಿ ಬಿಜೆಪಿಯು ಇಂತಹ ಪದ್ಧತಿಯ ಮೂಲಕ ಜಾತಿವಾದದ ಸಂಸ್ಕೃತಿಯನ್ನು ಹೇರಲು ಮುಂದಾಗುತ್ತಿದೆ. ಬಿಜೆಪಿಯು ಮೇಲ್ಜಾತಿ ಹಾಗೂ ಶ್ರೀಮಂತರ ಪಾದ ತೊಳೆದು ನಮಸ್ಕರಿಸುವ ಗುಲಾಮಗಿರಿಯ ನೀಚ ಸಂಸ್ಕೃತಿಯನ್ನು ಹೇರಲು ಈಗಲೇ ಸಿದ್ಧತೆ ನಡೆಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.  

ಈ ಹಿಂದೆ ಮಾಂಸವನ್ನು ತಿನ್ನುವ ಜನರನ್ನು ತಾನು ಇಷ್ಟಪಡುವುದಿಲ್ಲ ಎಂಬ ಇ.ಶ್ರೀಧರನ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.



Join Whatsapp