ಬಿಜೆಪಿಗೆ ಕೇವಲ 3 ಮತ, 7ನೇ ಸ್ಥಾನ ಆದರೂ ಸಂಭ್ರಮ

Prasthutha|

ಕೊಟ್ಟಾಯಂ: ಈ ಜಿಲ್ಲೆಯ ಎಲಿಕುಲಂ ಗ್ರಾಮ ಪಂಚಾಯತಿಯ ಎಲಮಂಗಲ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಕೇವಲ 3 ಮತಗಳನ್ನು ಪಡೆದು 7ನೇ ಸ್ಥಾನ ಪಡೆಯಿತು. ಆದರೂ ಸಂಭ್ರಮ ಆಚರಿಸಿದೆ.

- Advertisement -

ಕಾಂಗ್ರೆಸ್ ಸದಸ್ಯರ ನಿಧನದಿಂದ ಉಪ ಚುನಾವಣೆ ನಡೆದಿತ್ತು. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ 512 ಮತ ಪಡೆದು ಗೆದ್ದರು. ಎಡ ಪಕ್ಷಗಳ ಅಭ್ಯರ್ಥಿ 353 ಮತ ಪಡೆದರು. ಬಿಜೆಪಿ 3 ಮತ ಮಾತ್ರ ಪಡೆದರೂ ಕಳೆದ ಚುನಾವಣೆಯಲ್ಲಿ ಪಡೆದ 2 ಮತಕ್ಕಿಂತ 1 ಹೆಚ್ಚು ಎಂದರೆ 50% ಮುನ್ನಡೆ ಎಂದು ಬೀಗಿದೆ.

Join Whatsapp