ಪ್ರಧಾನಿ ಮೋದಿ ಭದ್ರತೆಗೆ ಅಳವಡಿಸಿದ್ದ ಹಗ್ಗ ಸಿಲುಕಿ ಬೈಕ್ ಸವಾರ ಸಾವು

Prasthutha|

ಕೊಚ್ಚಿ: ಪ್ರಧಾನಿ ಮೋದಿಯವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಇಲ್ಲಿನ ರಸ್ತೆಯೊಂದರಲ್ಲಿ ಅಳವಡಿಸಿದ್ದ ಹಗ್ಗಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರನೊಬ್ಬ ದುರಂತ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ವಡುತಳಾ ನಿವಾಸಿ ಮನೋಜ್ ಉಣ್ಣಿ ಮೃತರು. ಭಾನುವಾರ ರಾತ್ರಿ 10.30ಕ್ಕೆ ಘಟನೆ ನಡೆದಿದೆ. ಅಪಘಾತ ನಡೆದ ಕೂಡಲೇ ಸಮೀಪದ ಆಸ್ಪತ್ರೆಗೆ ಉಣ್ಣಿ ಅವರನ್ನು ಕರೆದುಕೊಂಡು ಹೋದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp