ತಿರುವನಂತಪುರ: ಕೇರಳದ ಮಲಂಪುಝ ಚೇರಾಟ್ ನ ಬೆಟ್ಟದ ಬಂಡೆಗಳ ನಡುವೆ ಸಿಲುಕಿದ್ದ ಬಾಬು ಎಂಬ ಯುವಕನನ್ನು 46 ಗಂಟೆಗಳ ನಂತರ ರಕ್ಷಣೆ ಮಾಡಲಾಗಿದೆ.
ಯುವಕನನ್ನು ರಕ್ಷಿಸಲು ಇಬ್ಬರು ವೈದ್ಯರು ಮತ್ತು ಅರಣ್ಯ ವೀಕ್ಷಕರು ಸೇರಿದಂತೆ 30 ಜನರ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದೆ.
ಬೆಟ್ಟದ ತುದಿಯಿಂದ ಒಂದು ತಂಡ ಮತ್ತೊಂದು ತಂಡ ಬೆಟ್ಟದ ಕೆಳಗಿನಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ ಎಂದು ವರದಿಯಾಗಿದೆ.
ಸೋಮವಾರ ಮಧ್ಯಾಹ್ನದ ಸುಮಾರಿಗೆ ಬಾಬು ಮತ್ತು ಇತರ ಇಬ್ಬರು ಮಕ್ಕಳು ಮಲಂಪುಝ ಚೇರಾಟ್ ನ ಕಡಿದಾದ ಬೆಟ್ಟವನ್ನು ಹತ್ತಿದ್ದರು.
ಆದರೆ ಮಕ್ಕಳಿಬ್ಬರೂ ಬೆಟ್ಟವನ್ನು ಹತ್ತಲಾಗದೆ ಅರ್ಧದಲ್ಲೇ ವಾಪಸ್ ಹೋಗಿದ್ದು, ಬಾಬು ಒಬ್ಬನೇ ಬೆಟ್ಟ ಹತ್ತಿದ್ದಾನೆ. ನಂತರ ಬೆಟ್ಟದ ತುದಿ ತಲುಪಿದಾಗ ಕಾಲು ಜಾರಿ ಬಾಬು ಬಂಡೆಗಳ ನಡುವೆ ಸಿಲುಕಿದ್ದ.