ಕೇಜ್ರಿವಾಲ್​​​ ರಾಜೀನಾಮೆ ಘೋಷಣೆ ಪಿಆರ್​ ಸ್ಟಂಟ್​ ಮತ್ತು ಗಿಮಿಕ್​: ಬಿಜೆಪಿ

Prasthutha|

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಎರಡು ದಿನಗಳ ನಂತರ ಸಿಎಂ ಅರವಿಂದ್​​ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಗ್ಗೆ ಬಿಜೆಪಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಇದೆಲ್ಲಾ ಕೇಜ್ರಿವಾಲ್​​​ ಅವರ ಪಿಆರ್​ ಸ್ಟಂಟ್​ ಮತ್ತು ಗಿಮಿಕ್​ ಎಂದು ಟೀಕಿಸಿದೆ.

- Advertisement -

ದೆಹಲಿಯ ಜನರ ಭಾವನೆಯಲ್ಲಿ ಅವರು ಇಮೇಜ್​ ಪ್ರಾಮಾಣಿಕ ನಾಯಕನ ಬದಲಿಗೆ ಭ್ರಷ್ಟ ನಾಯಕ ಎಂದಿದೆ ಎಂಬುದನ್ನು ಕೇಜ್ರಿವಾಲ್​ ಅರ್ಥಮಾಡಿಕೊಂಡಿದ್ದಾರೆ. ಇಂದು ಆಮ್ ಆದ್ಮಿ ಪಕ್ಷ ಇಡೀ ದೇಶದಲ್ಲಿ ಭ್ರಷ್ಟ ಪಕ್ಷ ಎಂದು ಕರೆಯಲ್ಪಡುತ್ತಿದೆ. ಅವರ ಪಿಆರ್​​​ ಸ್ಟಂಟ್​​ ಭಾಗವಾಗಿ ತಮ್ಮ ಇಮೇಜ್​ ಅನ್ನು ಮರುಸ್ಥಾಪಿಸುವ ಸಲುವಾಗಿ ಈ ಗಿಮಿಕ್​ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಹೇಳಿದರು.

ಕೇಜ್ರಿವಾಲ್​ ಅವರು ಸೋನಿಯಾಗಾಂಧಿ ಅವರನ್ನು ಅನುಸರಿಸಲು ಬಯಸುತ್ತಾರೆ. ಸೋನಿಯಾಗಾಂಧಿ ಅವರು ಮನಮೋಹನ್ ಸಿಂಗ್ ಅವರನ್ನು ಡಮ್ಮಿ ಪ್ರಧಾನಿ ಮಾಡಿ ತೆರೆಮರೆಯಲ್ಲಿ ಸರ್ಕಾರವನ್ನು ನಡೆಸಿದರು. ಇದೆ ಮಾದರಿಯನ್ನು ಕೇಜ್ರಿವಾಲ್​​ ಅನುಸರಿಸುತ್ತಿದ್ದಾರೆ. ಎಎಪಿಯು ದೆಹಲಿ ಚುನಾವಣೆಯಲ್ಲಿ ಸೋಲುತ್ತಿದೆ. ಜನರು ಅವರ ಹೆಸರಿಗೆ ಮತಚಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಕೇಜ್ರಿವಾಲ್​ ಬೇರೆಯವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

- Advertisement -

ಬಿಜೆಪಿ ನಾಯಕ ಮಂಜಿಂದರ್​ ಸಿಂಗ್​ ಸಿರ್ಸಾ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್​​ ಅವರಿಗೆ ಸುಪ್ರೀಂಕೋರ್ಟ್​​​ ಷರತ್ತುಬದ್ಧ ಜಾಮೀನು ವಿಧಿಸಿರುವುದರಿಂದ ಅವರಿಗೆ ರಾಜೀನಾಮೆ ನೀಡದೆ ಬೇರೆ ದಾರಿಯಿಲ್ಲ ಎಂದು ಹೇಳಿದರು. ಇದು ತ್ಯಾಗ ಅಲ್ಲ, ಸಿಎಂ ಕುರ್ಚಿ ಬಳಿ ಹೋಗುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಹೇಳಿದೆ. ಕೇಜ್ರಿವಾಲ್​​ ಯಾವುದೇ ಫೈಲ್‌ಗಳಿಗೆ ಸಹಿ ಮಾಡಲಾಗುವುದಿಲ್ಲ. ಆದ್ದರಿಂದ ಅವರಿಗೆ ಬೇರೆ ಆಯ್ಕೆಯಿಲ್ಲ. ಸುಪ್ರೀಂಕೋರ್ಟ್​ ಆದೇಶದ ಕಾರಣ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.ಈಗ ಅವರು ತಮ್ಮ ಹೆಂಡತಿಯನ್ನು ಸಿಎಂ ಮಾಡಲು ಎಲ್ಲಾ ಶಾಸಕರನ್ನು ಮನವೊಲಿಸುವ ಕಾರಣ ಅವರು ಎರಡು ದಿನ ಸಮಯ ಕೇಳಿದ್ದಾರೆ ಎಂದು ಹೇಳಿದರು.



Join Whatsapp