ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ವಿಪಶ್ಯನ ಧ್ಯಾನ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಹಾಗೂ ಜನರು ಒಮ್ಮೆ ಇದನ್ನು ಮಾಡಲು ಸಲಹೆ ನೀಡಿದ್ದಾರೆ. ವಿಪಸ್ಸನಾ ಒಂದು ಪ್ರಾಚೀನ ಭಾರತೀಯ ಧ್ಯಾನ ತಂತ್ರವಾಗಿದ್ದು, ಇದರಲ್ಲಿ ಅಭ್ಯಾಸಿಗಳು ತಮ್ಮ ಮಾನಸಿಕ ಯೋಗಕ್ಷೇಮವನ್ನು ಪುನಃಸ್ಥಾಪಿಸಲು ನಿಗದಿತ ಅವಧಿಯವರೆಗೆ ಮಾತು ಮತ್ತು ಸನ್ನೆಗಳ ಸಂವಹನದಿಂದ ದೂರವಿರುತ್ತಾರೆ.
ಒಂದು ವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಧ್ಯಾನಸ್ಥರಾಗಿಯೇ ಇರುವುದರಿಂದ ಯಾರೊಂದಿಗೂ ಮಾತನಾಡುವುದಿಲ್ಲ.ಧ್ಯಾನದ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಇಂದಿನಿಂದ ವಿಪಶ್ಯನ ಧ್ಯಾನ ಕೈಗೊಳ್ಳುತ್ತಿದ್ದೇನೆ. ನಾನು ವರ್ಷದಲ್ಲಿ ಒಮ್ಮೆಯಾದರೂ ಈ ಧ್ಯಾನ ಮಾಡುತ್ತೇನೆ. ಹಾಗಾಗಿ, ಮತ್ತೆ ಜನವರಿ 1ರಂದು ನಿಮ್ಮೆದುರು ಬರುತ್ತೇನೆ ಎಂದ್ದಿದ್ದಾರೆ.
100 ವರ್ಷದ ಹಿಂದೆ ಭಗವಾನ್ ಬುದ್ಧ ಈ ಧ್ಯಾನವನ್ನು ಪರಿಚಯಿಸಿದ್ದಾರೆ. ನೀವು ಯಾವಾಗಲಾದರೂ ಈ ಧ್ಯಾನ ಮಾಡಿದ್ದೀರಾ? ಇದನ್ನು ಮಾಡುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭವಿದೆ. ಹಾಗಾಗಿ ನೀವೂ ಮಾಡಿ’ ಎಂಬುದಾಗಿ ಸಲಹೆ ನೀಡಿದ್ದಾರೆ.