ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಬಕಾರಿ ನೀತಿ ಹಗರಣದ ಕಿಂಗ್ ಪಿನ್ ಮತ್ತು ಪ್ರಮುಖ ಸಂಚುಕೋರ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್’ಗೆ ಹೇಳಿದೆ.
ಕೇಜ್ರಿವಾಲ್ ಅವರು ತಮ್ಮ ಸಚಿವರು ಮತ್ತು ಎಎಪಿ ನಾಯಕರೊಂದಿಗೆ ಶಾಮೀಲಾಗಿ ಮದ್ಯದ ಉದ್ಯಮಿಗಳಿಂದ ಕಿಕ್ಬ್ಯಾಕ್ಗಳನ್ನು ಒತ್ತಾಯಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ದೆಹಲಿಯ ಎನ್ಸಿಟಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಸರ್ಕಾರದ ಸಚಿವರು, ಎಎಪಿ ನಾಯಕರು ಮತ್ತು ಇತರ ವ್ಯಕ್ತಿಗಳೊಂದಿಗೆ ಸೇರಿಕೊಂಡು ಅಪರಾಧ ಎಸಗಿದ್ದು, ಅವರೇ ದೆಹಲಿ ಅಬಕಾರಿ ಹಗರಣದ ಕಿಂಗ್ಪಿನ್ ಮತ್ತು ಪ್ರಮುಖ ಸಂಚುಕೋರರಾಗಿದ್ದಾರೆ ಎಂದು ಇಡಿ ತನ್ನ 734 ಪುಟಗಳ ಉತ್ತರ ಅಫಿಡವಿಟ್‌ನಲ್ಲಿ ತಿಳಿಸಿದೆ.
ಸಾಕ್ಷ್ಯಾಧಾರಗಳಗಳ ಮೇಲೆ ಅಪರಾಧಕ್ಕಾಗಿ ವ್ಯಕ್ತಿಯನ್ನು ಬಂಧಿಸುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಪರಿಕಲ್ಪನೆಗೆ ತೊಡಕಾಗುವುದಿಲ್ಲ ಎಂದು ಇಡಿ ತಿಳಿಸಿದೆ.