ನವದೆಹಲಿ: ನಿಮ್ಮ ಮಗನನ್ನು ಹುಚ್ಚು ಹುಚ್ಚಾಗಿ ಮಾತಾಡದಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ರಾತ್ರಿಹೊತ್ತು ಮದ್ಯ ಸೇವಿಸುವವರಿಂದ ಉತ್ತರಪ್ರದೇಶ ಭವಿಷ್ಯ ನರ್ತನ ಮಾಡ್ತಿದೆ ಎಂದು ರಾಹುಲ್ ಗಾಂಧಿ ಅಮೇಥಿಯಲ್ಲಿ ಯುಪಿ ಸರಕಾರವನ್ನು ಟೀಕೆ ಮಾಡಿದ್ದರು. ಅಲ್ಲದೆ,ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಹಾಡಹಗಲೇ ಕುಡಿದುಬಿದ್ದಿದ್ದ ವ್ಯಕ್ತಿಗಳನ್ನು ಕಂಡೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಸ್ಮೃತಿ ಇರಾನಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿಯವರ ಮಾತು ಕೇಳಿದ್ರೆ ಅವರ ಮನಸ್ಸಲ್ಲಿ ಎಷ್ಟು ವಿಷ ತುಂಬಿಕೊಂಡಿದೆ ಎನ್ನುವುದು ಗೊತ್ತಾಗ್ತಿದೆ. ತಮ್ಮ ಮಗನನ್ನು ಚೆನ್ನಾಗಿ ಬೆಳೆಸಲಾಗದಿದಿದ್ದರೆ ಹೋಯ್ತು.. ಕನಿಷ್ಠ ಹುಚ್ಚು ಹುಚ್ಚಾಗಿ ಮಾತಾಡದಂತೆ ನೋಡಿಕೊಳ್ಳಲಿ ಎಂದು ಸೋನಿಯಾ ಗಾಂಧಿಗೆ ಹೇಳಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ತಮ್ಮ ಮಾತಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.