ಸ್ವಯಂ ರಕ್ಷಣೆಗಾಗಿ ಬಿಯರ್ ಬಾಟಲುಗಳು, ಶಸ್ತ್ರಾಸ್ತ್ರ್ರ ಗಳನ್ನು ಇಟ್ಟುಕೊಳ್ಳಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

Prasthutha|

- Advertisement -

ಉನ್ನಾವೋ: ಗುಂಪು ದಾಳಿಯ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ರಕ್ಷಿಸುವುದಿಲ್ಲ. ಹಾಗಾಗಿ ಗಾಜಿನ ಬಿಯರ್ ಬಾಟಲುಗಳನ್ನು, ಬಾಣಗಳನ್ನು,ಶಸ್ತ್ರಾಸ್ತ್ರಗಳನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ ಎಂದು ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲದಲ್ಲಿ ಮಾಡಿರುವ ಪೋಸ್ಟ್‌ ವಿವಾದಕ್ಕೆ ಕಾರಣವಾಗಿದೆ. ಉದ್ರಿಕ್ತ ಸಮೂಹದಿಂದ ರಕ್ಷಿಸಿಕೊಳ್ಳಲು ಜನರೇ ಸ್ವಯಂಸಿದ್ದರಾಗಿರಬೇಕು. ನಿಮ್ಮ ಬೀದಿ, ನೆರೆಹೊರೆ ಅಥವಾ ಮನೆಗೆ ಈ ಗುಂಪು ಇದ್ದಕ್ಕಿದಂತೆ ಬಂದರೆ ಅದಕ್ಕೆ ಪರಿಹಾರವಿದೆ. ಅಂಥ ಅತಿಥಿಗಳಿಗೆ ಪ್ರತಿಮನೆಯೂ ಸಿದ್ಧವಾಗಿರಬೇಕು. ಒಂದು ಅಥವಾ ಎರಡು ಬಾಕ್ಸ್‌ ತಂಪು ಪಾನೀಯಗಳು ಮತ್ತು ಬಾಣಗಳನ್ನು ತೆಗೆದುಕೊಳ್ಳಿ, ಜೈ ಶ್ರೀರಾಮ್‌ ಎಂದು ಪೋಸ್ಟ್‌ ಮಾಡಿರುವ ಅವರು ಜೊತೆಗೆ ಚಿತ್ರವೊಂದನ್ನು ಹಾಕಿದ್ದಾರೆ.

- Advertisement -

ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ‘ಪೊಲೀಸರು ನಿಮ್ಮನ್ನು ಉಳಿಸಲು ಬರುವುದಿಲ್ಲ, ಬದಲಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತಾರೆ, ಈ ಜನರು ‘ಜಿಹಾದ್’ ಮಾಡಿ ಹೋದ ನಂತರ, ಪೊಲೀಸರು ಲಾಠಿಯೊಂದಿಗೆ ಬಂದು ಎಲ್ಲವೂ ಮುಗಿದ ನಂತರ ತನಿಖಾ ಸಮಿತಿಯನ್ನು ರಚಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.



Join Whatsapp