‘ಚುನಾವಣೆ ಬಂದಾಗ ಹಿಂದು-ಮುಸ್ಲಿಂ, ಪಾಕಿಸ್ತಾನ, ಸರ್ಜಿಕಲ್ ಸ್ಟ್ರೈಕ್ ನೆನಪಾಗುತ್ತದೆ’

Prasthutha|

ಹೈದರಾಬಾದ್: ಬಿಜೆಪಿಯವರಿಗೆ ಚುನಾವಣಾ ಸಮಯದಲ್ಲಿ ಹಿಂದು-ಮುಸ್ಲಿಂ ವಿಚಾರ, ಪಾಕಿಸ್ತಾನದ ಬಗೆಗಿನ ಭಾವುಕತೆ, ಗಡಿಯಲ್ಲಿನ ಡ್ರಾಮ.. ಸರ್ಜಿಕಲ್​ ಸ್ಟ್ರೈಕ್​ ಮಾತು ಆರಂಭವಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್​ ಹೇಳಿದ್ದಾರೆ.  

- Advertisement -

ಹೈದರಾಬಾದ್​​ನ ಇಂದಿರಾ ಪಾರ್ಕ್​ನಲ್ಲಿ ತಮ್ಮ ಸಂಪುಟ ಸದಸ್ಯರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ತೆಲಂಗಾಣ ಸಿಎಂ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ನೀವು KCR ವಿರುದ್ಧ ಪ್ರಕರಣವನ್ನು ದಾಖಲಿಸುವ ಮೂಲಕ ನನ್ನನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೀರಿ. KCR ಭಯಗೊಳ್ಳಬಹುದು ಎಂದು ನೀವು ಅಂದುಕೊಂಡಿದ್ದಿರೇನು ? ಚುನಾವಣೆಗಳು ಸಮೀಪಿಸಿದಾಗ ಕೋಮು ಸಂಬಂಧಿತ ಆತಂಕ ಸೃಷ್ಟಿಸುವಲ್ಲಿ ಬಿಜೆಪಿ ತೊಡಗಿಕೊಳ್ಳುತ್ತದೆ. ಜನರು ನಿಮ್ಮ ನಾಟಕವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ತೆಲಂಗಾಣ ಸಿಎಂ ಚಂದ್ರಶೇಖರರಾವ್​ ಹೇಳಿದ್ದಾರೆ.

ರಾಜ್ಯದಿಂದ ಭತ್ತ ಖರೀದಿಸುವಲ್ಲಿ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಸಿಎಂ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಇಂದಿರಾ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ‘ಭತ್ತ ಬೆಳೆಯಿರಿ ಎಂದು ಬಿಜೆಪಿ ಹೇಳುತ್ತದೆ. ಆದರೆ ಕೇಂದ್ರ ಅದನ್ನು ಖರೀದಿಸುತ್ತಿಲ್ಲ. ಅವರು ರಾಜಕೀಯ ಆಟಗಳನ್ನು ಆಡುತ್ತಿದ್ದಾರೆ. ನೀವು ಖರೀದಿಸದಿದ್ದರೆ, ನಾವು ಬಂದು ಭತ್ತವನ್ನು ಬಿಜೆಪಿ ಕಚೇರಿಯಲ್ಲಿ ಸುರಿಯುತ್ತೇವೆ’. ಇಲ್ಲಿರುವ ನಿಮ್ಮ ಗೂಢಾಚಾರರು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಚಂದ್ರಶೇಖರ ರಾವ್​ ಖಡಕ್ ಆಗಿ ಹೇಳಿದ್ದಾರೆ.

Join Whatsapp