ಕಾಶಿ ವಿಶ್ವನಾಥ ಮಂದಿರಕ್ಕೆ ಜಾಗ ಬಿಟ್ಟುಕೊಟ್ಟ ಜ್ಞಾನವ್ಯಾಪಿ ಮಸೀದಿ

Prasthutha|

ವಾರಾಣಸಿ: ಕಾಶಿ ವಿಶ್ವನಾಥ ಮಂದಿರಕ್ಕೆ 1,000 ಚದರ ಅಡಿ ಭೂಮಿಯನ್ನು ಬಿಟ್ಟುಕೊಡಲು ದೇಗುಲದ ಪಕ್ಕದಲ್ಲೇ ಇರುವ ಜ್ಞಾನವ್ಯಾಪಿ ಮಸೀದಿ ತೀರ್ಮಾನಿಸಿದೆ .

- Advertisement -

ಇಷ್ಟೇ ವಿಸ್ತೀರ್ಣದ ಭೂಮಿಯನ್ನು ಮಂದಿರವು ಮಸೀದಿಗೆ ಬೇರೆ ಕಡೆ ನೀಡಲಿದೆ. ಈ ಸಂಬಂಧ ದೇವಸ್ಥಾನ ಮತ್ತು ಮಸೀದಿ ಆಡಳಿತ ಮಂಡಳಿಗಳ ನಡುವೆ ಒಪ್ಪಂದ ಏರ್ಪಟ್ಟಿದೆ . ಈ ಒಪ್ಪಂದದಿಂದ ಸುದೀರ್ಘ ಕಾನೂನು ಹೋರಾಟಕ್ಕೂ ತೆರೆ ಬೀಳಲಿದೆ ಎಂದು ವ್ಯಾಖ್ಯಾನಿಸಿದೆ.

ಮೊಘಲ್ ಚಕ್ರವರ್ತಿ ಔರಂಗಜೇಬ್ ವಿಶ್ವನಾಥ ಮಂದಿರಕ್ಕೆ ಸೇರಿದ ಕೆಲ ಜಾಗವನ್ನು ಅತಿಕ್ರಮಣ ಮಾಡಿ ಜ್ಞಾನವ್ಯಾಪಿ ಮಸೀದಿ ನಿರ್ಮಿಸಿದ್ದಾನೆ, ಹೀಗಾಗಿ ಈ ಜಾಗವನ್ನು ಮಂದಿರಕ್ಕೆ ಬಿಟ್ಟು ಕೊಡ ಬೇಕು ಎಂದು ಕೋರಿ ಅನೇಕ ಹಿಂದೂ ಸಂಘಟನೆಗಳು ಕೋರ್ಟ್ ನಲ್ಲಿ ದಾವೆ ಹೂಡಿವೆ .

- Advertisement -

ಈ ವರ್ಷದ ಆರಂಭದಲ್ಲಿ ವಾರಾಣಸಿ ಸಿವಿಲ್ ನ್ಯಾಯಾಧೀಶ ಅಶುತೋಷ್ ತಿವಾರಿ ಅವರು ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಉತ್ಖನನ ಕೈಗೊಳ್ಳುವಂತೆ ಪ್ರಾಚ್ಯವಸ್ತು ಇಲಾಖೆಗೆ ನಿರ್ದೇಶನ ನೀಡಿದ್ದರು. ಮಸೀದಿ ಜಾಗದಲ್ಲಿ ಮಂದಿರ ಇತ್ತೇ, ಇಲ್ಲವೇ ಎನ್ನುವುದನ್ನು ತಿಳಿಯಲು ಉತ್ಖನನ ಅನಿವಾರ್ಯ ಎಂದು ತಮ್ಮ ಆದೇಶಕ್ಕೆ ಕಾರಣ ನೀಡಿದ್ದರು.

ಈ ಆದೇಶದ ವಿರುದ್ಧ ಉತ್ತರ ಪ್ರದೇಶ ಕೇಂದ್ರ ಸುನ್ನಿ ವಕ್ಫ್ ಮಂಡಳಿಯು ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದೆ.

Join Whatsapp