ಕೋಟ: ಕಾಶ್ಮೀರಿ ಫೈಲ್ಸ್ ಚಿತ್ರ ಬಿಡುಗಡೆಯ ವೇಳೆ ಮಂಗಳವಾರ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ರಾಜಸ್ತಾನದ ಕೋಟ ಜಿಲ್ಲಾಡಳಿತವು ಇಂದಿನಿಂದ ಒಂದು ತಿಂಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ.
ಮಾರ್ಚ್ 22ರ ಬೆಳಿಗ್ಗೆ 6 ಗಂಟೆಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ ನ 144ನೇ ವಿಧಿಯಂತೆ ನಿಷೇಧಾಜ್ಞೆ ಜಾರಿಗೆ ಬಂದಿದೆ. ಏಪ್ರಿಲ್ 21ರ ಮಧ್ಯರಾತ್ರಿಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಘೋಷಣೆ ಕೂಗುವುದು, ಗುಂಪು ಸೇರುವುದು ನಿಷಿದ್ಧ, ಅದೇ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಅವಧಿಯಲ್ಲಿ ಏನನ್ನೂ ಹಂಚಿಕೊಳ್ಳಬಾರದು. ಯಾವುದೇ ರೀತಿಯಲ್ಲಿ ಧಾರ್ಮಿಕ ವೈರಕ್ಕೆ ದಾರಿ ಮಾಡುವುದು ಅಪರಾಧ ಎಂದು ಹೇಳಲಾಗಿದೆ.
ಕೋಟ ಜಿಲ್ಲಾಧಿಕಾರಿಯವರು ಮಾರ್ಚ್ 21ರಂದು ಈ ಬಗೆಗಿನ ಆಜ್ಞೆಯನ್ನು ಕೋಟ ಎಸ್ ಪಿ ಚೇತಿ ಚಾಂದ್ ರಿಗೆ ಅವರಿಗೆ ನೀಡಿದರು. ಮಹಾವೀರ ಜಯಂತಿ, ಶುಭ ಶುಕ್ರವಾರ, ಬೈಶಾಕಿ ಮತ್ತು ಜಮಾದುಲ್ ವಿದಾ ಈ ಕಾಲದಲ್ಲಿ ಬರುತ್ತವೆ, ಯಾವುದೇ ಕೋಮು ಸೂಕ್ಷ್ಮತೆಗೆ ಅವಕಾಶವಾಗಬಾರದು. ಇದರ ನಡುವೆ ಗದ್ದಲ ಹುಟ್ಟಿಸಿರುವ ಕಾಶ್ಮೀರ ಫೈಲ್ಸ್ ಇವೆಲ್ಲ ಗಲಾಟೆಯಿಲ್ಲದೆ ನಡೆಯಲು ನಿಷೇಧಾಜ್ಞೆ ಬಳಸಲಾಗಿದೆ.
ಜಿಲ್ಲಾಧಿಕಾರಿ ಹರಿಮೋಮನ್ ಮೀನಾ ರಜೆಯಲ್ಲಿ ಇರುವುದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಸಿಂಗ್ ಆಜ್ಞೆ ಮಾಡಿದ್ದಾರೆ.
“ಇದು ಕಾಶ್ಮೀರ ಫೈಲ್ಸ್ ಸಿನಿಮಾ ನಡೆಯದಂತೆ ಮಾಡುವ ತಂತ್ರ. ಥಿಯೇಟರ್ ಗಳು ಸಾರ್ವಜನಿಕ ಸ್ಥಳವಾದುದರಿಂದ ಜನ ಹೇಗೆ ಸಿನಿಮಾ ನೋಡುತ್ತಾರೆ” ಬಿಜೆಪಿಯ ವಕ್ತಾರ ರಾಂಲಾಲ್ ಶರ್ಮಾ ಹೇಳುವುದು ಹೀಗೆ.
ಅಲ್ಲದೆ ಜಿಲ್ಲಾಧಿಕಾರಿ ಈ ತಿಂಗಳ ಎಲ್ಲ ಹಬ್ಬಗಳನ್ನು ನಿಷೇಧಾಜ್ಞೆಯೊಳಕ್ಕೆ ತಳ್ಳಿರುವುದರಿಂದ ಅವುಗಳನ್ನು ಆಚರಿಸುವುದಾದರೂ ಹೇಗೆ ಎನ್ನುವುದು ಅವರ ಪ್ರಶ್ನೆಯಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿಯವರು, ಸಿನಿಮಾ ಪ್ರದರ್ಶನಕ್ಕೆ ಹಬ್ಬದ ಆಚರಣೆಗೆ ನಿಷೇಧ ವಿಧಿಸಿಲ್ಲ ಎಂದು ಹೇಳಿದರು.