ದಿ ಕಾಶ್ಮೀರ ಫೈಲ್ಸ್ ಸಿನಿಮಾ ಪ್ರಚಾರದ ತೆವಲಿಗಾಗಿ ಮಾಡಲಾಗಿದೆ, ನಾನು ವೀಕ್ಷಿಸುವುದಿಲ್ಲ: ಗುಪ್ತಚರ ವಿಭಾಗ ಮಾಜಿ ಮುಖ್ಯಸ್ಥ

Prasthutha|

ನವದೆಹಲಿ: ದಿ ಕಾಶ್ಮೀರ ಫೈಲ್ಸ್ ಎಂಬ ಸಿನಿಮಾವು ಪ್ರಚಾರದ ತೆವಲಿಗಾಗಿ ನಿರ್ಮಿಸಲಾಗಿದ್ದು, ಅದನ್ನು ನಾನು ವೀಕ್ಷಿಸುವುದಿಲ್ಲ ಎಂದು ನಿವೃತ್ತ RAW ಮುಖ್ಯಸ್ಥ ಎ.ಎಸ್. ದುಲತ್ ತಿಳಿಸಿದ್ದಾರೆ.

- Advertisement -

ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಲಾಗಿತ್ತು ಎಂಬುವುದರಲ್ಲಿ ಸಂಶಯವಿಲ್ಲ, ಆದರೆ ಮುಸ್ಲಿಮರನ್ನು ಒಳಗೊಂಡಂತೆ ಹಲವರನ್ನು ಗುರಿಯಾಗಿಸಲಾಗಿತ್ತು ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

1990 ರಲ್ಲಿ ನಡೆದ ಹತ್ಯಾಕಾಂಡ ಬಳಿಕ ಕಾಶ್ಮೀರಿ ಪಂಡಿತರು ಸ್ಥಳಾಂತರಗೊಳ್ಳಲು ಪ್ರಾರಂಭಿಸಿದ್ದರು. ಇದರಲ್ಲಿ ಶ್ರೀಮಂತರು ದೆಹಲಿ ಕಡೆಗೆ ಪ್ರಯಾಣಿಸಿದರೆ, ಬಡವರು ಜಮ್ಮುವಿನಲ್ಲಿ ತೆರೆಯಲಾದ ಶಿಬಿರದಲ್ಲಿ ಆಶ್ರಯ ಪಡೆದಿದ್ದರು ಎಂದು ನೆನೆಸಿದರು.

- Advertisement -

ಈ ಮಧ್ಯೆ 1989 ರಲ್ಲಿ ಅಂದಿನ ಗೃಹ ಸಚಿವ ಮುಫ್ತಿ ಮುಹಮ್ಮದ್ ಸಯೀದ್ ಎಂಬವರ ಪುತ್ರಿ ರುಬೈಯ್ಯಾ ಸಯೀದ್ ಎಂಬಾಕೆಯ ಅಪಹರಣ ಮತ್ತು ಬಿಡುಗಡೆಗೆ ಪರ್ಯಾಯವಾಗಿ ಐದು ಉಗ್ರರ ಬಿಡುಗಡೆಯ ಶರತ್ತು ಎಲ್ಲವನ್ನೂ ಬದಲಾಯಿಸಿತ್ತು. ಈ ಸಂದರ್ಭದಲ್ಲಿ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿದಿತ್ತು ಎಂದು ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ದುಲತ್ ತಿಳಿಸುತ್ತಾರೆ.

ಕಾಶ್ಮೀರಿ ಪಂಡಿತರ ಅಭದ್ರತೆ ಭಾವನೆಯು ಅವರನ್ನು ರಾಜ್ಯ ತೊರೆಯುವಂತೆ ಮಾಡಿತ್ತು. ಆರ್ಥಿಕ ಸದೃಢವಾಗಿ ಕಾಶ್ಮೀರಿ ಮುಸ್ಲಿಮರು ದೆಹಲಿಗೆ ಕಡೆಗೆ ತೆರಳಿದ್ದರು. ಕಾಶ್ಮೀರಿ ಪಂಡಿತರಿಗಿಂತಲೂ ಅಧಿಕ ಮುಸ್ಲಿಮರು ಕಾಶ್ಮೀರ ಬಿಟ್ಟು ತೆರಳಿದ್ದು, ಆ ವೇಳೆ ಹಲವರನ್ನು ಕೊಲೆ ನಡೆಸಲಾಗಿತ್ತು ಅವರು ಸಾಂದರ್ಭಿಕವಾಗಿ ತಿಳಿಸಿದ್ದಾರೆ.

ಈ ಮಧ್ಯೆ ಕಾಶ್ಮೀರ ಕಣಿವೆಯಲ್ಲಿದ್ದ ಪಂಡಿತನ್ನು ಮುಸ್ಲಿಮರು ಸಂರಕ್ಷಿಸಿದ್ದರು. ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕವೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಲ್ಲ ಎಂದ ಅವರು ಪಂಡಿತರ ನೆರವಿಗಾಗಿ ಸರ್ಕಾರ ಏನೂ ಮಾಡಿಲ್ಲ ಎಂದು ದುಲತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




Join Whatsapp