ಕಾಶ್ಮೀರ ಫೈಲ್ಸ್ ಎಂಬುದು ಸುಳ್ಳಿನ ಕಡತ: ಪಂಡಿತರ ಕೊಲೆ 89, ಇತರರ ಕೊಲೆ 1,635!

Prasthutha|

ಕಾಶ್ಮೀರ: ಕಾಶ್ಮೀರಿ ಪಂಡಿತರ ಕೊಲೆ ನಡೆದದ್ದು 1990ರಲ್ಲಿ. ಆಗ ಬಿಜೆಪಿ ಬೆಂಬಲದ ಕೇಂದ್ರ ಸರಕಾರ ಅಧಿಕಾರದಲ್ಲಿತ್ತು. ಅದೇ ವೇಳೆ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವಿತ್ತು ಹಾಗೂ ಬಿಜೆಪಿವಾಲಾ ಜಗ್ ಮೋಹನ್  ರಾಜ್ಯಪಾಲರಾಗಿದ್ದರು. ಅಲ್ಲದೆ ಕಾಶ್ಮೀರ ಪೊಲೀಸರು ಆರ್ ಟಿಐಗೆ ಉತ್ತರಿಸಿರುವುದು ಹೀಗೆ: ಪಂಡಿತರ ಕೊಲೆಯಾಗಿರುವುದು 89 ಹಾಗೂ ಇತರರ ಕೊಲೆಯಾಗಿರುವುದು 1,635.

- Advertisement -

ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಯಾಗಿದ್ದು, ಬಿಜೆಪಿ ಆಡಳಿತದ ರಾಜ್ಯಗಳು ಅದಕ್ಕೆ ತೆರಿಗೆ ವಿನಾಯಿತಿ ನೀಡಿವೆ. ಕೇರಳ ಕಾಂಗ್ರೆಸ್ ಸಹಿತ ದೇಶದ ಹಲವು ಕಾಂಗ್ರೆಸ್ ಸಂಘಟನೆಗಳು ಕಾಶ್ಮೀರಿ ಪಂಡಿತರ ಬಗೆಗಿನ ಸತ್ಯಗಳನ್ನು ಟ್ವೀಟ್ ಮಾಡಿ ಹ್ಯಾಶ್ ಟ್ಯಾಗ್ ಮಾಡಿವೆ.

ಕಾಶ್ಮೀರ ಫೈಲ್ಸ್ ಎಂಬುದು ಸುಳ್ಳಿನ ಕಡತ ಎಂದು ಸತ್ಯವನ್ನು ತೆರೆದಿಡಲಾಗಿದೆ. ಬಿಜೆಪಿಯ ಜಗ್ ಮೋಹನ್ ಕಾಶ್ಮೀರಿ ಪಂಡಿತರ ಕೊಲೆಯಾಗುವಾಗ ಅವರಿಗೆ ರಕ್ಷಣೆ ನೀಡದೆ ಅವರ ವಲಸೆಗೆ ತರಾತುರಿ ಮಾಡಿದರು. ಆದರೆ ಬಿಜೆಪಿಯು ಕಾಂಗ್ರೆಸ್ ಕಾಶ್ಮೀರದಲ್ಲಿ ಪಂಡಿತರು ವಾಸಿಸದಂತೆ ಮಾಡಿದೆ ಎನ್ನುತ್ತಾರೆ. ಚಿತ್ರ ಅದನ್ನು ಇತಿಹಾಸ ಎಂದಿದೆ.

- Advertisement -

ಕಾಶ್ಮೀರ ಪಂಡಿತರ ಕೊಲೆ 1990ರಲ್ಲಿ ಆದಾಗ ಬಿಜೆಪಿಯವರೇ ಆದ ರಾಜ್ಯಪಾಲ ಜಗ್ ಮೋಹನ್ ಕೈಲಿ ನಾವು ಸುರಕ್ಷಿತರಲ್ಲ ಎಂದು ವಲಸೆ ಹೊರಟರು.

ಪಕ್ಕಾ ಆರೆಸ್ಸೆಸ್ ಮನುಷ್ಯ ಜಗ್ ಮೋಹನ್ ನಿರ್ದೇಶನದಲ್ಲಿ ಪಂಡಿತರು ಕಾಶ್ಮೀರ ಬಿಟ್ಟರು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. “ಆ ವಲಸೆ ಸಮಯದಲ್ಲಿ ಬಿಜೆಪಿ ಸಂಘ ಪರಿವಾರವು ದೇಶದಲ್ಲಿ ರಾಮ ಮಂದಿರ ಎನ್ನುತ್ತ ಹಿಂದೂ ಮುಸ್ಲಿಂ ವಿಭಜನೆಯ ಕೆಲಸದಲ್ಲಿ ತೊಡಗಿಕೊಂಡಿತ್ತು. ಸುಳ್ಳು ಹರಡಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ನಡೆಸಿದ ಕುತಂತ್ರ ಇದು” ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ.

1990ರ ಜನವರಿಯಲ್ಲಿ ಕಾಶ್ಮೀರಿ ಪಂಡಿತರ ವಲಸೆ ಆರಂಭವಾಯಿತು. ಬಿಜೆಪಿಯ ಬೆಂಬಲದ ವಿ. ಪಿ. ಸಿಂಗ್ ಸರಕಾರ ಬಂತಲ್ಲ, ಬಿಜೆಪಿ ಏಕೆ ಅವರನ್ನು ಕಾಶ್ಮೀರಕ್ಕೆ ಮರು ಒಯ್ಯಲಿಲ್ಲ. 5,242 ಪಂಡಿತ ವಸತಿಗಳನ್ನು ನಿರ್ಮಿಸಿ ಕೊಟ್ಟುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹೊರತು ಬಿಜೆಪಿಯಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಬಿಜೆಪಿ ಸಂಸದ ಕೆ. ಎಲ್. ಅಲ್ಫೋನ್ ಮಾತ್ರ ಕಾಂಗ್ರೆಸ್ಸಿಗೆ ಚರಿತ್ರೆ ಗೊತ್ತಿಲ್ಲ. ಒಂದೂವರೆ ಲಕ್ಷ ಪಂಡಿತರು ವಲಸೆ ಹೋದರು ಎಂದಿದ್ದಾರೆ.

Join Whatsapp