ಕಾಸರಗೋಡು | ದ್ವಿಚಕ್ರ, ಲಾರಿ ನಡುವೆ ಅಪಘಾತ: ವಿದ್ಯಾರ್ಥಿ ಮೃತ್ಯು

Prasthutha|

ಕಾಸರಗೋಡು: ಸ್ಕೂಟರ್’ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೇಕಲ ಸಮೀಪದ ಪಳ್ಳಿಕೆರೆಯಲ್ಲಿ ನಡೆದಿದೆ.

- Advertisement -


ಚಂದ್ರಗಿರಿ ಶಾಲೆಯ ಪ್ಲಸ್ ವನ್ ಕಲಿಯುತ್ತಿದ್ದ ಅಸ್ಬಾಕ್ (18) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.


ಅಸ್ಬಾಕ್ ಬೇಕಲ ಮವ್ವಾಲ್ ನಿವಾಸಿಯಾಗಿದ್ದು, ಈತ ಬೆಳಿಗ್ಗೆ ಸ್ಕೂಟರ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.



Join Whatsapp