ಕಾಸರಗೋಡು : ಮೈಮೇಲೆ ಮರ ಬಿದ್ದು ಶಾಲಾ ವಿದ್ಯಾರ್ಥಿನಿ ಮೃತ್ಯು

Prasthutha|

ಕಾಸರಗೋಡು : ಮೈಮೇಲೆ ಮರ ಬಿದ್ದು ಶಾಲಾ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಅಂಗಡಿಮೊಗರು ಎಂಬಲ್ಲಿ ನಡೆದಿದೆ.

- Advertisement -

ಮೃತಪಟ್ಟ ವಿದ್ಯಾರ್ಥಿನಿಯನ್ನು ಅರ್ಲಾಡ ನಿವಾಸಿ ಯುಸೂಫ್ ಎಂಬವರ ಪುತ್ರಿ, ಅಂಗಡಿ ಮೊಗರು ಸರಕಾರಿ ಶಾಲೆಯ 6 ನೇ ತರಗತಿಯಲ್ಲಿ ಕಲಿಯುತ್ತಿರುವ ಆಯಿಶತ್ ಮಿನ್ಹಾ(11) ಎಂದು ಗುರುತಿಸಲಾಗಿದೆ.  

ಇಂದು(ಸೋಮವಾರ) 4 ಗಂಟೆ ಸುಮಾರಿಗೆ ಶಾಲೆ ಬಿಟ್ಟು ಮನೆಗೆ ತೆರಳುವ ಮಧ್ಯೆ ಜೋರಾಗಿ ಬೀಸಿದ ಗಾಳಿ ಮಳೆಯಿಂದ ಮರವೊಂದು ಮೈ ಮೇಲೆ ಬಿದ್ದು ಮಿನ್ಹಾ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.  

- Advertisement -

ವಿದ್ಯಾರ್ಥಿನಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಿಕರ ರೋಧನೆ ಮುಗಿಲು ಮುಟ್ಟಿದೆ. ಹೃದಯವಿದ್ರಾವಕ ಘಟನೆಗೆ ಇಡೀ ಊರೇ ಮಮ್ಮಲ ಮರುಗಿದೆ.

Join Whatsapp