ಕಾಸರಗೋಡು: ನವೆಂಬರ್ 22, 23 ರಂದು ಜಾಮಿಅ ಸಅದಿಯ್ಯ ಅರಬಿಯ್ಯ ಸನದುದಾನ ಸಮ್ಮೇಳನ

Prasthutha|

ಮಂಗಳೂರು: ದಕ್ಷಿಣ ಭಾರತದ ಪ್ರಖ್ಯಾತ ಧಾರ್ಮಿಕ ಲೌಕಿಕ ಶಿಕ್ಷಣ ಸಮುಚ್ಚಯ ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ ಶರೀಅತ್ ಕಾಲೇಜು ಹಾಗೂ ಹಿಫ್ಳುಲ್ ಕುರ್‌ಆನ್ ಕಾಲೇಜಿನ ಸನದುದಾನ ಸಮ್ಮೇಳನ ಮತ್ತು ತಾಜುಲ್ ಉಲಮಾ, ನೂರುಲ್ ಉಲಮಾ ಆಂಡ್ ನೇರ್ಚೆ ನ.22 ಮತ್ತು 23ರಂದು ಸಅದಿಯ್ಯದಲ್ಲಿ ನಡೆಯಲಿದೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಜ್ಲಿಸುಲ್ ಉಲಮಾಇಸ್ಸಅದಿಯ್ಯೀನ್ (ಕರ್ನಾಟಕ) ಉಪಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

- Advertisement -


ನ.22ರಂದು ತಾಜುಲ್ ಉಲಮಾ, ಮರ್ಹೂಮ್ ಸಈದ್ ಮುಸ್ಲಿಯಾರ್, ಕೆ.ವಿ. ಉಸ್ತಾದ್, ಅಬ್ದುಲ್ ಖಾದರ್ ಮುಸ್ಲಿಯಾರ್ ಮೇಲ್ಪರಂಬ್, ನೂರುಲ್ ಉಲಮಾ ಎಂ.ಎ. ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರ ಮಖ್ಬರ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಸಂಜೆ 4 ಗಂಟೆಗೆ ಸಯ್ಯದ್ ಇಬ್ರಾಹೀಂ ಪೂಕುಞಿ ತಂಙಳ್ ಕಲ್ಲಕಟ್ಟ ಧ್ವಜಾರೋಹಣಗೈಯ್ಯಲಿದ್ದಾರೆ.


ಸಂಜೆ 4.30ಕ್ಕೆ ಸಅದಿಯ್ಯ ಅಧ್ಯಕ್ಷ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಾಂಸ್ಕೃತಿಕ ಸಮಾವೇಶದಲ್ಲಿ ಕೇರಳ ರಾಜ್ಯ ಸಚಿವ ಅಹ್ಮದ್ ದೇವರ್ ಕೋವಿಲ್, ರಾಜ್ಯ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಶಾಸಕರಾದ ಸಿ.ಎಚ್. ಕುಞಂಬು, ಎನ್.ಎ. ನೆಲ್ಲಿಕುನ್ನು, ಇ. ಚಂದ್ರಶೇಖರನ್, ಎಕೆಎಂ ಅಶ್ರಫ್ ಹಾಗೂ ರಾಜಗೋಪಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಜ್ಲಿಸುಲ್ ಉಲಮಾಇ ಸ್ಸಅದಿಯ್ಯೀನ್ ಕೇಂದ್ರ ಸಮಿತಿ ಕೋಶಾಧಿಕಾರಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು ಉದ್ಬೋಧನೆ ನಡೆಸಲಿದ್ದಾರೆ.


23ರಂದು ಸಂಜೆ 5ಗಂಟೆಗೆ ನಡೆಯುವ ಸನದುದಾನ ಸಮಾರಂಭದಲ್ಲಿ ಸಅದಿಯ್ಯ ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಕೇರಳ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಂ ಖಲೀಲ್‌ ಬುಖಾರಿ ತಂಙಳ್ ಕಡಲುಂಡಿ, ಸಯ್ಯದ್ ಅಲೀ ಬಾಫಕೀಹ್ ತಂಙಳ್, ಸಮಸ್ತ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ಮಜ್ಲಿಸುಲ್ ಉಲಮಾಉ-ಇ-ಸ್ಸದಿಯ್ಯೀನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಇಸ್ಮಾಯಿಲ್ ಸಅದಿ, ಜಾಮಿಯಾ ಸಅದಿಯಾ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಕತರ್, ಜಾಮಿಯಾ ಸಅದಿಯಾ ಸಿಟಿ ಸಮಿತಿ ಅಧ್ಯಕ್ಷ ಆಲ್ ಹಾಜ್ ಮೊಯ್ದಿನ್ ಅಲ್‌ ಸಫರ್ ಮುಕ್ಕ ಉಪಸ್ಥಿತರಿದ್ದರು.








Join Whatsapp