ಕಾಸರಗೋಡು: ಸಿಪಿಐಎಂ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ಮುನ್ನಡೆ

Prasthutha|

ಕಾಸರಗೋಡು: ಲೋಕಸಭೆ ಚುನಾವಣೆಯ ಕಾಸರಗೋಡು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಸಿಪಿಐಎಂ ನ ಎಂ.ವಿ ಬಾಲಕೃಷ್ಣನ್ 516 ಮತಗಳ ಮುನ್ನಡೆ ದೊರಕಿದೆ. ಇವರ ವಿರುದ್ದ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಸ್ಪರ್ಧಿಸಿದ್ದಾರೆ.

- Advertisement -


ಅಂಚೆ ಮತದಾನದ ಎಣಿಕೆಯ ಬಳಿಕ ಪ್ರಥಮ ಬ್ಲಾಕ್ ನಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರ, ಎರಡನೇ ಬ್ಲಾಕ್ ನಲ್ಲಿ ಕಾಞಂಗಾಡ್, ತ್ರಿಕ್ಕರಿಪುರ,ಪಯ್ಯನ್ನೂರು ಹಾಗೂ ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.

Join Whatsapp