ಕಾಸರಗೋಡು: ನದಿಗೆ ಹಾರಿದ್ದ ಉದ್ಯಮಿಯ ಮೃತದೇಹ ಪತ್ತೆ

Prasthutha|

ಕಾಸರಗೋಡು: ಸೇತುವೆಯಿಂದ ನದಿಗೆ ಹಾರಿದ್ದ ಉದ್ಯಮಿಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.

- Advertisement -

ಉಳಿಯತ್ತಡ್ಕ ಶಿರಿಬಾಗಿಲಿನ ಹಸೈನಾರ್ (46) ಮೃತಪಟ್ಟವರು ಎಂದು ತಿಳಿದು ಬಂದಿದೆ.
ನನ್ನ ಜೀವನ ಅಂತ್ಯಗೊಳಿಸುವುದಾಗಿ ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ಶುಕ್ರವಾರ ಮುಂಜಾನೆ ಸಂದೇಶ ಕಳುಹಿಸಿದ್ದ ಹಸೈನಾರ್ ಬಳಿಕ ಕಾರಿನಲ್ಲಿ ಬಂದು ಚಂದ್ರಗಿರಿ ಸೇತುವೆಯಲ್ಲಿ ನಿಲ್ಲಿಸಿ ನಂತರ ನದಿಗೆ ಹಾರಿದ್ದರು.

Join Whatsapp