ಕಾಸರಗೋಡು: ಕಾಸರಗೋಡು ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಆಹಾರ ಸುರಕ್ಷತಾ ವಿಭಾಗದ ವಿಶೇಷ ತಂಡದಿಂದ ನಡೆದ ತಪಾಸಣೆ ವೇಳೆ ತಮಿಳುನಾಡಿನಿಂದ ಬಂದ ಲಾರಿಯಿಂದ 200 ಕೆ.ಜಿ. ಕೊಳೆತ ಮೀನುಗಳನ್ನು ಪತ್ತೆಹಚ್ಚಲಾಗಿದೆ.
ಎಂಟು ಪೆಟ್ಟಿಗೆಗಳಲ್ಲಿ ಮೀನುಗಳನ್ನು ಸಂಗ್ರಹಿಸಲಾಗಿತ್ತು. ಹಳಸಿದ ಮೀನುಗಳನ್ನು ಮಾರಾಟಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಇತ್ತೀಚೆಗೆ ಚೆರುವತ್ತೂರಿನಲ್ಲಿ ವಿಷಾಹಾರ ಸೇವಿಸಿ ಮರಣ ಮತ್ತು ಅನಾರೋಗ್ಯ ಸಮಸ್ಯೆಗಳು ಉಂಟಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ತಪಾಸಣೆ ನಡೆಯುತ್ತಿದೆ.